ತೂತು ಮಡಿಕೆಯಲ್ಲಿ ಪಾವನಾ ಗೌಡ!

Picture of Cinibuzz

Cinibuzz

Bureau Report

ಹಳ್ಳಿಗಳ ಕಡೆ ಯಾರಾದರೂ ಹೆಡ್ಡನಿಗೋ, ಎಡಬಿಡಂಗಿಗೋ `ಏನ್ಲಾ ಒಳ್ಳೆ ತೂತು ಮಡಿಕೆ ತರ ಆಡ್ತ್ಯಾ’ ಎಂದು ಗೇಲಿ ಮಾಡುವಾಗ ಆ ಪದವನ್ನು ಕೇಳಿರುತ್ತೇವೆ. ಆದರೆ ಈಗ ತೂತು ಮಡಿಕೆ ಅನ್ನೋ ಪದ ಚಂದನವನದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ.

ಯೆಸ್.. ಇತ್ತೀಚಿಗಷ್ಟೇ ಮುಹೂರ್ತ ನೆರವೇರಿಸಿಕೊಂಡು ಸೆಟ್ಟೇರಿರುವ ಹೊಸ ಸಿನಿಮಾ ತೂತು ಮಡಿಕೆ. ವಿಶೇಷವೆಂದರೆ ಡಿಫರೆಂಟ್ ಟೈಟಲ್ ನಿಂದ ಗಮನ ಸೆಳೆದಿರುವ ಈ ಚಿತ್ರದಲ್ಲಿ ಸ್ಲಮ್ ಹುಡುಗಿಯಾಗಿ ಪಾವನ ಗೌಡ ನಟಿಸುತ್ತಿದ್ದಾರೆ. ಸದ್ಯದಲ್ಲಿಯೇ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಇಡೀ ಚಿತ್ರದ ತುಂಬಾ ಸ್ಲಮ್ ಹುಡುಗಿಯ ಗೆಟಪ್ ನಲ್ಲಿಯೇ ಪಾವನಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತೂತುಮಡಿಕೆಯನ್ನು ನಿರ್ದೇಶನ ಮಾಡುತ್ತಿರುವ ಚಂದ್ರ ಕೀರ್ತಿ ಯವರೇ ನಾಯಕನಾಗಿಯೂ ಮಿಂಚಲಿದ್ದಾರೆ. ಇದೊಂದು ಲವ್ ಸ್ಟೋರಿ ಬೇಸ್ಡ್ ಕಥೆಯಾಗಿದ್ದು, ರಘುನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top