ನಾಳೆ ಡಿಯರ್ ಕಾಮ್ರೇಡ್ ಟ್ರೇಲರ್ ರಿಲೀಸ್!

Picture of Cinibuzz

Cinibuzz

Bureau Report

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ಡಿಯರ್ ಕಾಮ್ರೇಡ್.  ನಾಳೆ ಬೆಳಿಗ್ಗೆ 11 ಗಂಟೆ 11 ನಿಮಿಷಕ್ಕೆ ಡಿಯರ್ ಕಾಮ್ರೇಡ್ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಈಗಾಗಲೇ ಟೀಸರ್ ಮತ್ತು ಆಡಿಯೋ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಡಿಯರ್ ಕಾಮ್ರೇಡ್ ಟ್ರೇಲರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಡಿಯರ್ ಕಾಮ್ರೇಡ್’ ಟೀಸರ್ ಪ್ರೇಕ್ಷಕರಿಂದ ಬರಪೂರ ಮೆಚ್ಚುಗೆಯನ್ನು ಗಳಿಸಿದೆ. ಚಿತ್ರದಲ್ಲಿ ವಿಜಯ್ ಸ್ಟೂಡೆಂಟ್ ಲೀಡರ್ ಆಗಿ , ರಶ್ಮಿಕಾ ಕ್ರಿಕೆಟ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಭರತ್ ಕಮ್ಮ ನಿರ್ದೇಶಿಸಿದ್ದಾರೆ. ಈ ಹಿಂದೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಗೀತ ಗೋವಿಂದಂ ಎಂಬ ಯಶಸ್ವಿ ಚಿತ್ರದಲ್ಲಿ ಅಭಿನಯಿಸಿದ್ದರು.

ಇನ್ನಷ್ಟು ಓದಿರಿ

Scroll to Top