ದುಬಾರಿ ಬಜೆಟ್ ನಲ್ಲಿ ತಯಾರಾಗಲಿದೆ ಪುಣ್ಯ ಕೋಟಿ!

Picture of Cinibuzz

Cinibuzz

Bureau Report

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ಅವನೇ ಶ್ರೀಮನ್ನಾರಾಯಣ ಮತ್ತು 777 ಚಾರ್ಲಿ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಅವನೇ ಶ್ರೀಮನ್ನಾರಾಯಣ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದರ ಜತೆಗೆ 777 ಚಾರ್ಲಿ ಕೂಡ ಬಹುತೇಕ ಮುಗಿದಿದ್ದು, ಸದ್ಯದಲ್ಲಿಯೇ ಫೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿದೆ. ಇದಾದ ಮೇಲೆ ರಕ್ಷಿತ್ ಶೆಟ್ಟಿ ಪುಣ್ಯಕೋಟಿ ಎಂಬ ಸಿನಿಮಾವನ್ನು ಆರಂಭಿಸಲಿದ್ದಾರೆಂಬ ಸುದ್ದಿ ಈಗಾಗಲೇ ಹೊರಬಿದ್ದಿದ್ದು, ಈ ಚಿತ್ರದ ನಿರ್ದೇಶನವನ್ನೂ ರಕ್ಷಿತ್ ಶೆಟ್ಟಿಯೇ ಮಾಡುತ್ತಿರುವುದು ವಿಶೇಷವಾಗಿದೆ.

ಸದ್ಯದ ಸುದ್ದಿ ಏನಂದ್ರೆ ಪುಣ್ಯಕೋಟಿ ದುಬಾರಿ ಬಜೆಟ್ ನಲ್ಲಿ ರೆಡಿಯಾಗಲಿದೆಯಂತೆ. ಯೆಸ್ ಅಂದಾಜು 100 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗುವ ಸಾಧ್ಯತೆ ಇದೆಯಂತೆ. 300 ವರ್ಷಗಳ ಹಿಂದಿನ ಕಥೆಯನ್ನು ತೆರೆ ಮೇಲೆ ತರುವ ಪ್ಲ್ಯಾನ್ ನಲ್ಲಿ ಸಿಂಪಲ್ ಸ್ಟಾರಿದ್ದು, ಅದಕ್ಕನುಗುಣವಾಗಿ ಅಗತ್ಯವಿರುವ ಬ್ಯಾಗ್ರೌಂಡನ್ನು ನಿರ್ಮಿಸಲು ಯೋಜಿಸಿದ್ದಾರೆ ಎನ್ನಲಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಯ ನಂತರವಷ್ಟೇ ಪುಣ್ಯ ಕೋಟಿ ಆರಂಭವಾಗಲಿದ್ದು, ಎಲ್ಲ ಅಂದುಕೊಂಡಂತಾದರೆ ಇದೇ ವರ್ಷದ ಕೊನೆಯಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top