ಈ ವಾರ ಫುಲ್ ಟೈಟ್ ಪ್ಯಾತೆ ಬಿಡುಗಡೆ!

Picture of Cinibuzz

Cinibuzz

Bureau Report

ಮಧ್ಯಪಾನದ ಜತೆಯಲ್ಲಿ ತನ್ನ ಪಾಲಕರ ಪಾಲನೆ ಮಾಡುವ ಕಥೆ ಒಂದು ಕಡೆಯಾದರೆ ಮಧ್ಯಪಾನದಿಂದ ಆಗುವ ಅನಾಹುತವನ್ನು ಸಂದೇಶಾತ್ಮಕವಾಗಿ ತಿಳಿಯುವ ಪ್ರಯತ್ನ ಮತ್ತೊಂದು ಕಡೆ. ಫುಲ್ ಟೈಟ್ ಪ್ಯಾತೆ ಎನ್ನುವ ಟೈಟಲ್ಲಿಟ್ಟಿಕೊಂಡು ಈ ವಾರ ರಿಲೀಸ್ ಗೆ ರೆಡಿಯಾಗಿರುವ ಚಿತ್ರದ ಕಥಾಹಂದರವಿದು.

ವೃದ್ಧ ತಂದೆಯ ಪಾತ್ರದಲ್ಲಿ ವೈಜಯಂತ್ ಬಿರಾದರ್ ನಟಿಸಿದ್ದು, ಪಾಲನೆ ಮಾಡುವ ಮಗನ ಪಾತ್ರದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ಎಲ್.ಜಿ. ಪುಟ್ಟಣ್ಣ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಾನಸ ಗೌಡ, ಶಿವ ರಾಮನಗರ, ಸೂರ್ಯ ತೇಜ, ಎಂ ಎಂ ಮುರುಗ, ಅಜಯ್ ಕೃಷ್ಣಪ್ಪ, ಗಿರೀಷ್ ರಾಜು, ಆನಂದ್, ಸೈನಗ, ಬೇಬಿ ಪ್ರಾಪ್ತಿ ತಾರಾಗಣದಲ್ಲಿದ್ದಾರೆ. ಬ್ರದರ್ಸ್ ಪಿಕ್ಚರ್ಸ್ ಹೌಸ್ ವತಿಯಿಂದ ಈ ಸಿನಿಮಾ ತಯಾರಾಗಿದ್ದು, ಮಹೇಶ್ ಪ್ರಸಾದ್ ಛಾಯಾಗ್ರಹಣ, ಜಗದೀಶ್ ಜೆ ಮತ್ತು ಗಿರೀಶ್ ಸಂಕಲನ, ಆರ್.ಎಂ.ವಿ ಮತ್ತು ಸಜೀವ್ ಸಂಗೀತ ಈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top