ಭರಾಟೆಗಾಗಿ ವಿದೇಶಕ್ಕೆ ಹಾರಲಿರುವ ಶ್ರೀಮುರಳಿ!

Picture of Cinibuzz

Cinibuzz

Bureau Report

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದಕ್ಕಾಗಿ ಚಿತ್ರತಂಡ ವಿದೇಶಕ್ಕೆ ಹಾರಲಿದೆಯಂತೆ. ಆಗಸ್ಟ್ 2ರಂದು ಸ್ವಿಡ್ಜರ್ ಲೆಂಡ್ ಗೆ ತೆರಳಲಿರುವ ಭರಾಟೆ ಚಿತ್ರತಂಡ ಹಾಡುಗಳ ಚಿತ್ರೀಕರಣವನ್ನು ಮಾಡಿಕೊಳ್ಳಲಿದೆ.

ಈ ಹಾಡುಗಳಿಗೆ ಎ. ಹರ್ಷ ನೃತ್ಯ ಸಂಯೋಜನೆ ಮಾಡಲಿದ್ದು, ಶ್ರೀ ಮುರಳಿ ಮತ್ತು ಶ್ರೀ ಲೀಲಾ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಇನ್ನು ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಭರ್ಜರಿ ಚೇತನ್ ಭರಾಟೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top