ಸದ್ಯದಲ್ಲೇ ಸೇಕ್ರೆಡ್ ಗೇಮ್ಸ್ ಶುರು!

Picture of Cinibuzz

Cinibuzz

Bureau Report

ನೆಟ್ ಫ್ಲಿಕ್ಸ್ ನ ಜನಪ್ರಿಯ ವೆಬ್ ಸರಣಿ ಸೇಕ್ರೆಡ್ ಗೇಮ್ಸ್ ನ ಎರಡನೇ ಸೀಸನ್ ಸದ್ಯದಲ್ಲೇ ಆರಂಭವಾಗಲಿದೆ. ಜುಲೈ ತಿಂಗಳಲ್ಲಿಯೇ ಆರಂಭವಾಗಬೇಕಿದ್ದು ಈ ವಿವಾದಿತ ಕಾರ್ಯಕ್ರಮ ಆಗಸ್ಟ್ 15ರಿಂದ ಪ್ರಸಾರವಾಗಲಿದೆ. ವಿಕ್ರಮ್ ಚಂದ್ರ ಎಂಬುವವರ ಕಾದಂಬರಿ ಆಧಾರಿತ ಕಥೆ ಇದಾಗಿದ್ದು, ಅನುರಾಗ್ ಕಶ್ಯಪ್ ಈ ವೆಬ್ ಸಿರೀಸನ್ನು ನಿರ್ದೇಶನ ಮಾಡಿದ್ದಾರೆ.
ಇನ್ನು ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ ಹಾಗೂ ರಾಧಿಕಾ ಅಪ್ಟೆ ಮುಖ್ಯ ಭೂಮಿಕೆಯಲ್ಲಿದ್ದ ವೆಬ್​ ಸರಣಿ ಈಗಾಗಲೇ ವೀಕ್ಷಕರ ಮನಗೆದ್ದಿದೆ.

ಈ ಬಾರಿ ರಣವೀರ್ ಶೋರೆ ಹಾಗೂ ಕಲ್ಕಿ ಕೋಚ್ಲಿನ್ ಟೀಮಿಗೆ ಸೇರ್ಪಡೆಯಾಗಿದ್ದಾರೆ. ಮೊದಲ ಸೀಜನ್ ನಲ್ಲಿ ರಾಧಿಕಾ ಪಾತ್ರಧಾರಿಯ ಹತ್ಯೆಯಾಗಿತ್ತು. ಆದರೆ ಸೀಸನ್ 2 ಟ್ರೇಲರ್ ನಲ್ಲಿ ಕಚೇರಿಯ ಕೆಲಸದಲ್ಲಿ ನಿರತನಾಗಿರುವಂತೆ ಕಾಣಿಸಿಕೊಂಡಿರೋದು ವೀಕ್ಷಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಮಿಕ್ಕಂತೆ ಸರ್ದಾರ್ ಸಿಂಗ್ ಜೊತೆ ಗಾಯ್ತೊಂಡೆ ಮಾತುಕತೆ, ಅಂತಾರಾಷ್ಟ್ರೀಯ ಮಟ್ಟಕ್ಕೇರಿದ ಆಧಾತ್ಮ ಗುರುವನ್ನು ತೋರಿಸಲಾಗಿದೆ.

ಇನ್ನಷ್ಟು ಓದಿರಿ

Scroll to Top