ಧಾಕಡ್ ಸಿನಿಮಾದಲ್ಲಿ ಕಂಗನಾ ಆ್ಯಕ್ಷನ್!

Picture of Cinibuzz

Cinibuzz

Bureau Report

ಕಂಗನಾ ರಣಾವತ್ ಅಭಿನಯದ ಸದ್ಯ `ಜಡ್ಜ್ ಮೆಂಟಲ್ ಹೈ ಕ್ಯಾ’ ಸಿನಿಮಾ ಜುಲೈ 26ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ ಕಂಗನಾ `ಧಾಕಡ್’ ಎಂಬ ಆ್ಯಕ್ಷನ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಸೀಕ್ವೆನ್ಸ್ ನಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಸದ್ಯ ಹೊಸದೊಂದು ಪೋಸ್ಟರ್ ಬಿಡುಗಡೆಯಾಗಿದ್ದು, ನೋಡುಗರ ಕಣ್ಣು ಕುಕ್ಕುತ್ತಿದೆ. ಧಾಕಡ್ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲಿನ ಚಿತ್ರವಾಗುವ ಜತೆಗೆ ಭಾರತೀಯ ಚಿತ್ರರಂಗದಲ್ಲಿ ಒಂದು ಪ್ರಮುಖ ಚಿತ್ರವಾಗಿ ಹೊರಹೊಮ್ಮಲಿದೆ ಎನ್ನುತ್ತಾರೆ ಕಂಗನಾ. ಈ ಚಿತ್ರಕ್ಕೆ ರಜನೀಶ್ ಘಾಯ್ ನಿರ್ದೇಶನ ಮಾಡಲಿದ್ದು, 2020ರ ಅಂತ್ಯಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top