ಅಂತೆ ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟ ಅನುಪಮಾ ಪರಮೇಶ್ವರನ್!

Picture of Cinibuzz

Cinibuzz

Bureau Report

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ನಟ ಸಾರ್ವಭೌಮದಲ್ಲಿ ನಟಿಸಿದ್ದ ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್. ಸದ್ಯ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ತೊಡಗಿಕೊಂಡಿದ್ದ ಅನುಪಮಾ ಇತ್ತೀಚಿಗೆ ಬಹಳಷ್ಟು ಸುದ್ದಿಯಾಗಿದ್ದರು.

ಯೆಸ್.. ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಜತೆಗೆ ಅನುಪಮಾ ಹೆಸರು ತಳುಕು ಹಾಕಿಕೊಂಡಿದ್ದು, ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿತ್ತು. ಅಲ್ಲದೇ ಸೋಶಿಯಲ್ ಖಾತೆಗಳಲ್ಲಿ ಒಬ್ಬರನ್ನೊಬ್ಬರು ಫಾಲೋ, ಕಮೆಂಟ್ ಮಾಡುವ ಮೂಲಕ ಮತ್ತಷ್ಟು ಅನುಮಾನಗಳಿಗೂ ಕಾರಣವಾಗಿದ್ದರು. ಹೀಗೆ ಹರಿದಾಡುತ್ತಿದ್ದ ಅಂತೆ ಕಂತೆಗಳನ್ನು ಅನುಪಮಾ ತಳ್ಳಿ ಹಾಕಿದ್ದು, “ನಾನು ಮತ್ತು ಬುಮ್ರಾ ಜಸ್ಟ್ ಫ್ರೆಂಡ್ಸ್ ಅಷ್ಟೇ. ನಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ” ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇನ್ನಷ್ಟು ಓದಿರಿ

Scroll to Top