ಚೊಚ್ಚಲ ಬಾರಿಗೆ ಪೊಲೀಸ್ ಕಾಪ್ ಆದ ಅಜೇಯ್ ರಾವ್!

Picture of Cinibuzz

Cinibuzz

Bureau Report

ಇಲ್ಲಿಯವರೆವಿಗೂ ಲವರ್ ಬಾಯ್ ಆಗಿ, ಭಗ್ನ ಪ್ರೇಮಿಯಾಗಿ ಕನ್ನಡಿಗರ ಮನಸೂರೆಗೊಳಿಸಿದ್ದ ಅಜಯ್ ರಾವ್ ತಾಯಿಗೆ ತಕ್ಕ ಮಗ ಸಿನಿಮಾದ ನಂತರ ಬೇರೆ ಬೇರೆ ಜಾನರ್ ನ ಸಿನಿಮಾಗಳಲ್ಲಿ ಒಪ್ಪಿಕೊ‍ಳ್ಳುತ್ತಿದ್ದಾರೆ. ಹೌದು.. ಸದ್ಯ ಕೃಷ್ಣ ಅಜೇಯ್ ರಾವ್ ಮೊದಲ ಬಾರಿಗೆ ಪೊಲೀಸ್ ಕಾಪ್ ಆಗಿ ಮಿಂಚಲಿದ್ದಾರೆ.

ಈ ಸಿನಿಮಾವನ್ನು ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಟೈಟಲಿನ್ನು ಅಂತಿಮಗೊಂಡಿಲ್ಲ. ಈ ಸಿನಿಮಾವನ್ನು ಎಸ್. ರಾಜವರ್ಧನ್ ನಿರ್ದೇಶನ ಮಾಡಲಿದ್ದು, ಚಿತ್ರದ ಫಸ್ಟ್ ಲುಕ್ ಇತ್ತೀಚಿಗಷ್ಟೇ ಬಿಡುಗಡೆ ಕೂಡ ಆಗಿದೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದೆ.

ಇನ್ನಷ್ಟು ಓದಿರಿ

Scroll to Top