ಟ್ರೆಕ್ಕಿಂಗ್ ಖುಷಿಯಲ್ಲಿ ರಕ್ಷಿತ್ ಶೆಟ್ಟಿ!

Picture of Cinibuzz

Cinibuzz

Bureau Report

ಚಿತ್ರೀಕರಣದ ಬ್ಯುಸಿಯಲ್ಲಿರುವಾಗಲೇ ನಟ ರಕ್ಷಿತ್ ಶೆಟ್ಟಿ ಟ್ರೆಕ್ಕಿಂಗ್ ಗೆ ಹೋಗಿ ಬಂದಿದ್ದಾರೆ. ಇವರಿಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಥ್ ನೀಡಿದ್ದಾರೆ.

ಜಿಮ್ ನಲ್ಲಿ ಬೆವರಿಳಿಸುವುದು ಕಾಮನ್ನು. ಶೂಟಿಂಗ್ ವೇಳೆ ಸ್ವಲ್ಪ ಚೇಂಜ್ ಇರಲಿ ಅಂತ ಸಿದ್ಧರ ಬೆಟ್ಟಕ್ಕೆ ಟ್ರೆಕ್ಕಿಂಗಿಗೆ ಹೋದೆವು. ಹೀಗೆ ಟ್ರೆಕ್ಕಿಂಗ್ ಗೆ ಹೋಗೋದು ನಿಜಕ್ಕೂ ಅದ್ಭುತವಾದ ಅನುಭವ. ಇಡೀ ಬೆಟ್ಟವನ್ನು 2 ಬ್ರೇಕ್‌ ತಗೊಂಡು 30 ನಿಮಿಷದಲ್ಲಿ ಹತ್ತಿದೆವು. ಬೆಟ್ಟದ ಮೇಲೆ ಮೆಡಿಟೇಷನ್‌ ಮಾಡಿದೆವು. ಸುತ್ತಲಿನ ಪರಿಸರವನ್ನು ಎತ್ತರದ ಸ್ಥಳದಿಂದ ನೋಡುವುದೇ ಮಜ ಎಂದಿದ್ದಾರೆ ರಕ್ಷಿತ್‌ ಶೆಟ್ಟಿ. ಟ್ರೆಕ್ಕಿಂಗ್ ಸಂದರ್ಭದಲ್ಲಿಯೂ ಫ್ಯಾನ್ ಗಳು ಬೆನ್ನತ್ತಿದ್ದು, ಕ್ಯಾಪ್ ಹಾಕಿಕೊಂಡು ಗೊತ್ತಾಗದಂತೆ ಹೋಗಿದ್ದರೂ ಸಹ ಜನ ಗುರುತಿಸಿ ಮಾತನಾಡಿಸಿದರಂತೆ. ರಿಕ್ವೆಸ್ಟ್ ಮಾಡಿಕೊಂಡ ಬಳಿಕವಷ್ಟೇ ನಮ್ಮ ದಾರಿ ಸುಗವಾಯಿತು ಎನ್ನುತ್ತಾರೆ ಸಿಂಪಲ್ ಸ್ಟಾರ್

ಇನ್ನಷ್ಟು ಓದಿರಿ

Scroll to Top