ದಶರಥ ಪ್ರೋಮೋ ಬಿಡುಗಡೆ!

Picture of Cinibuzz

Cinibuzz

Bureau Report

ಕ್ರೇಜಿಸ್ಟಾರ್ ವಿ ರವಿಚಂದ್ರನ್ ಮತ್ತು ಸೋನಿಯಾ ಅಭಿನಯದ ದಶರಥ ಸಿನಿಮಾ ಇದೇ ತಿಂಗಳ 26 ರಂದು ಬಿಡುಗಡೆಯಾಗುತ್ತಿದೆ. ಇದೇ ವೇಳೆ ದಶರಥ ಚಿತ್ರದ ಪ್ರೋಮೋವೊಂದು ಬಿಡುಗಡೆಯಾಗಿದ್ದು ನೋಡುಗರಿಂದ ಬರಪೂರ ಮೆಚ್ಚುಗೆಯನ್ನು ಪಡೆಯುತ್ತಿದೆ. ಪ್ರೋಮೋದಲ್ಲಿ ಲಾಯರ್ ಪಾತ್ರಧಾರಿಯಾಗಿರುವ ರವಿಚಂದ್ರನ್ ಒಂದು ಹೆಣ್ಣಿನ ಮೇಲೆ ಅತ್ಯಾಚಾರ ಆಗುವಾಗ, ಆ ಹೆಣ್ಣು ಅವನನ್ನು ಸಾಯುವ ಹಾಗೆ ಹೊಡೆದರೂ, ಕೊನೆಗೆ ಸಾಯಿಸಿದರೂ ಅದು ಕೊಲೆ ಎನ್ನಿಸಿಕೊಳ್ಳುವುದಿಲ್ಲ ಎಂಬ ಡೈಲಾಗ್ ಮೂಲಕ ಗಮನ ಸೆಳೆದಿದ್ದಾರೆ.

ರಾಮಾಯಣದಲ್ಲಿ ಕೇಳಿರುವ ಪ್ರಮುಖ ಹೆಸರಾದ ದಶರಥ, ಆಧುನಿಕ ರಾಮಾಯಣದ ಕಥೆಯನ್ನು ತಿಳಿಸುವ ಕಥೆಯಾಗಿದ್ದು, ಮೂಲ ರಾಮಾಯಣಕ್ಕೂ ಆಧುನಿಕ ರಾಮಾಯಣಕ್ಕೂ ಲಿಂಕ್ ಇರುವುದಂತೂ ಗ್ಯಾರಂಟಿಯಂತೆ. ಈ ಚಿತ್ರವನ್ನು ಎಂ.ಎಸ್. ರಮೇಶ್ ನಿರ್ದೇಶನ ಮಾಡಿದ್ದು, ಸಾಕಷ್ಟು ವರ್ಷಗಳ ನಂತರ ರವಿಚಂದ್ರನ್ ಮತ್ತೊಮ್ಮೆ ಲಾಯರ್ ದಿರಿಸಿನಲ್ಲಿ ಮಿಂಚಿದ್ದಾರೆ. ರವಿಚಂದ್ರನ್ ಅವರಿಗೆ ಜೋಡಿಯಾಗಿ ಚಂದು ಖ್ಯಾತಿಯ ಸೋನಿಯಾ ಮಿಂಚಿದ್ದಾರೆ. ಉಳಿದಂತೆ ಮೇಘಶ್ರೀ, ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top