ಇದೇ ಶನಿವಾರ ಕುರುಕ್ಷೇತ್ರದ ಮತ್ತೊಂದು ಸಾಂಗ್ ರಿಲೀಸ್!

Picture of Cinibuzz

Cinibuzz

Bureau Report

ಸದ್ಯ ಭಾರತದಾದ್ಯಂತ ಸಾಕಷ್ಟು ಸದ್ದು ಮಾಡುತ್ತಿರುವ ಕನ್ನಡದ ಪೌರಾಣಿಕ ಸಿನಿಮಾ ಕುರುಕ್ಷೇತ್ರ. ಬಹುದೊಡ್ಡ ತಾರಾಂಗಣವಿರುವ ಕುರುಕ್ಷೇತ್ರ ಈಗಾಗಲೇ ಟ್ರೇಲರ್, ಟೀಸರ್, ಪೋಸ್ಟರ್, ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ.

ಈಗಾಗಲೇಕುರುಕ್ಷೇತ್ರಚಿತ್ರದ ಸಾಹೋರೆ ಸಾಹೋ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸಾಕಷ್ಟು ಟ್ರೆಂಡಿಂಗ್ ನಲ್ಲಿದೆ. ಇದೇ ಜುಲೈ 13ರ ಶನಿವಾರದಂದು ಕುರುಕ್ಷೇತ್ರ ಚಿತ್ರದ ದುರ್ಯೋಧನ ಮತ್ತು ಭಾನುಮತಿ ದಂಪತಿಗಳ ನಡುವಿನ ಯುಗಳ ಗೀತೆ ಚಾರುತಂತಿ ಬಿಡುಗಡೆಯಾಗಲಿದೆ. ಲಹರಿ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಶನಿವಾರ ಆರು ಗಂಟೆ ಮೂರು ನಿಮಿಷಕ್ಕೆ ಬಿಡುಗಡೆಯಾಗುತ್ತಿರುವ ಈ ಹಾಡಿನ ಸಾಹಿತ್ಯವನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top