ಬಾಲಿವುಡ್ ನಟಿ ರಾಧಿಕಾ ಆಪ್ಟೆ ಹಾಗೂ ನಟ ದೇವ್ ಪಟೇಲ್ ನಟಿಸಿರುವ ಬ್ರಿಟಿಷ್ ಅಮೆರಿಕನ್ ಸಿನಿಮಾ ದಿ ವೆಡ್ಡಿಂಗ್ ಗೆಸ್ಟ್ ನ ಹಸಿ ಬಿಸಿ ದೃಶ್ಯಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೋಲ್ಡ್ ನಟನೆಯ ಸಿನಿಮಾಗಳಿಗೆ ಕೊಂಚವೂ ಹಿಂಜರಿಯದೇ ನಟಿಸುವ ರಾಧಿಕಾ ಆಪ್ಟೆ ಈ ಕುರಿತು ಮಾತನಾಡಿದ್ದು, ಇದರಲ್ಲಿ ನಾಚಿಕೆ ಪಡುವಂಥದ್ದು ಏನಿದೆ? ನಾನು ಒಳ್ಳೆಯ ಪರ್ಫಾಮರ್ ಆಗಿ, ದೇಹವನ್ನು ಟೂಲ್ ಆಗಿ ಯೂಸ್ ಮಾಡಿಕೊಳ್ಳುತ್ತೇನೆ ಎಂದು ನೆರೆದಿದ್ದವರ ಹುಬ್ಬೇರುವಂತೆ ಮಾಡಿದೆ.
ಇದೀಗ ‘ದಿ ವೆಡ್ಡಿಂಗ್ ಗೆಸ್ಟ್‘ ಚಿತ್ರದ ಕೆಲವು ಸ್ಟಿಲ್ ಗಳು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ರಾಧಿಕಾ ಅರೆನಗ್ನಳಾಗಿ ನಟ ದೇವ್ ಪಟೇಲ್ ಅವರನ್ನು ತಬ್ಬಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾವನ್ನು ಮೈಕೆಲ್ ವಿಮಟರ್ ಬಾಟಂ ನಿರ್ದೇಶಿಸಿದ್ದಾರೆ.











































