ಪೊಗರು ಬೆಡಗಿ ಟಿಕ್ ಟಾಕ್ ಗೆ ಎಂಟ್ರಿ!

Picture of Cinibuzz

Cinibuzz

Bureau Report

ಭಾರತಕ್ಕೆ ಟಿಕ್ ಟಾಕ್ ಲಗ್ಗೆ ಇಟ್ಟ ಮೇಲಂತೂ ಪ್ರತಿಯೊಂದು ಮನೆಯಲ್ಲಿಯೂ ಸೆಲೆಬ್ರೆಟಿಗಳು ಹುಟ್ಟುಕೊಂಡಿದ್ದಾರೆ. ಅವಕಾಶ ವಂಚಿತರಿಗೆ ಟಿಕ್ ಟಾಪ್ ಒಂದು ವೇದಿಕೆಯಾಗಿದ್ದು, ಸಾಕಷ್ಟು ಜನರ ಬದುಕಿಗೆ ದಾರಿದೀಪ ಕೂಡ. ಸೋಶಿಯಲ್ ಮೀಡಿಯಾದಲ್ಲಂತೂ ಟಿಕ್ ವಿಡಿಯೋಗಳೇ ಬಹಳಷ್ಟು ಸದ್ದು ಮಾಡುತ್ತಿದ್ದು, ಸಾಕಷ್ಟು ಮಜ ನೀಡುವ ಜತೆಗೆ ಇರಿಟೇಟ್ ಕೂಡ ಮಾಡುವಂತಹ ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತವೆ.

ಇತ್ತೀಚಿಗಷ್ಟೇ ಪೊಗರು ಹೀರೋ ಧ್ರುವ ಸರ್ಜಾ ಟಿಕ್ ಟಾಕ್ ವಿಡಿಯೋವೊಂದನ್ನು ಮಾಡಿದ್ದರು. ಇದೀಗ ಪೊಗರು ಹೀರೋಯಿನ್ ರಶ್ಮಿಕಾ ಮಂದಣ್ಣ ಟಿಕ್ ಟಾಕ್ ಗೆ ಎಂಟ್ರಿಕೊಟ್ಟಿದ್ದಾರೆ. ಟಿಕ್ ಟಾಕ್ ವಿಡಿಯೋಗಳಿಗೆ ಫಿದಾ ಆಗಿರುವ ರಶ್ಮಿಕಾ ಮಂದಣ್ಣ ಹೊಸ ಖಾತೆಯೊಂದನ್ನು ತೆರೆದಿದ್ದಾರೆ. Iamrashmika ಅವರ ಟಿಕ್ ಟಾಕ್ ಹ್ಯಾಂಡಲ್ ಮಾಡಲಾಗುತ್ತಿದ್ದು, ಟಿಕ್ ಟಾಕ್ ಖಾತೆ ಮೂಲಕ ತಮ್ಮ ಮುಂದಿನ ಸಿನಿಮಾಗಳ ಕುರಿತಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಇನ್ನಷ್ಟು ಓದಿರಿ

Scroll to Top