ಡಿಯರ್ ಕಾಮ್ರೇಡ್ ಟ್ರೇಲರ್ ರಿಲೀಸ್!

Picture of Cinibuzz

Cinibuzz

Bureau Report

ಒಂದು ಸಿನಿಮಾದಲ್ಲಿ ನಾಯಕ ನಾಯಕಿಯ ರೊಮ್ಯಾನ್ಸ್ ಹಿಟ್ ಆಯ್ತು ಅಂದ್ರೆ ಸಾಕು.. ಅವರ ಮುಂದಿನ ಸಿನಿಮಾದಲ್ಲೂ ಅಂತಹುದೇ ರೊಮ್ಯಾನ್ಸ್, ಹಗ್ಗು, ಲಪ್ ಲಾಕುಗಳಿಗೆ ಬರವಿರೋಲ್ಲ. ಸದ್ಯ ಡಿಯರ್ ಕಾಮ್ರೇಡ್ ಅದನ್ನು ಸಾಬೀತುಪಡಿಸಿದೆ. ಯೆಸ್. ಡಿಯರ್ ಕಾಮ್ರೇಡ್ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಇಲ್ಲೂ ಸಹ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಕಿಸ್ಸಿನ ಮಳೆ ಮುಂದುವರೆದಿದೆ. ಉಳಿದಂತೆ ಟ್ರೇಲರ್ ನಲ್ಲಿ ಲವ್, ಆ್ಯಕ್ಷನ್, ಎಮೋಷನ್ ಮಾದರಿಯ ಎಲ್ಲ ಮಸಾಲೆ ಅಂಶಗಳನ್ನೂ ಕಾಣಬಹುದಾಗಿದೆ.

ವಿದ್ಯಾರ್ಥಿ ನಾಯಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದರೆ, ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿಯಾಗಿ ರಶ್ಮಿಕಾ ಮಿಂಚಿದ್ದಾರೆ. ಇವರಿಬ್ಬರ ನಡುವಿನ ಲವ್ ಸ್ಟೋರಿ ಟ್ರೇಲರ್ ನಲ್ಲಿ ಕ್ಯಾರಿಯಾಗಿದ್ದು, ವಿಜಯ್ ದೇವರಕೊಂಡ ಗತ್ತಿನಲ್ಲಿ ಅಬ್ಬರಿಸಿದ್ದಾರೆ. ಡಿಯರ್ ಕಾಮ್ರೇಡ್ ತೆಲುಗು ಸೇರಿದಂತೆ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಇದೇ ಜುಲೈ 26ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಓದಿರಿ

Scroll to Top