ಕನ್ನಡದ ಕುರುಕ್ಷೇತ್ರ ಚಿತ್ರದ ಟ್ರೇಲರ್ ಇತ್ತೀಚಿಗಷ್ಟೇ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿರುವ ಜತೆಗೆ ಬರೋಬ್ಬರಿ ಎರಡು ಮಿಲಿಯನ್ ಹಿಟ್ಸ್ ಪಡೆಯುವತ್ತ ಮುನ್ನುಗ್ಗುತ್ತಿದೆ. ಅಲ್ಲದೇ ಸಾಕಷ್ಟು ಪಾಸೀಟಿವ್ ನೆಗೆಟೀವ್ ಕಮೆಂಟುಗಳ ಸುರಿಮಳೆಯೇ ಆಗಿದೆ. ವಿಶೇಷವೆಂದರೆ ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರುವ ಕುರುಕ್ಷೇತ್ರ ಟ್ರೇಲರ್ ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಕಮೆಂಟ್ ಡಿಸೇಬಲ್ ಕೂಡ ಮಾಡಿ ಚಿತ್ರತಂಡ ಜಾಣತನವನ್ನು ಮೆರೆದಿದೆ. ಇರಲಿ..
ಕನ್ನಡದ ಟ್ರೇಲರ್ ಹಿಟ್ ಆಗುತ್ತಿದ್ದಂತೆ ಕುರುಕ್ಷೇತ್ರ ಚಿತ್ರತಂಡ ಪರಭಾಷೆಗಳಲ್ಲೂ ಟ್ರೇಲರ್ ಬಿಡುಗಡೆ ಮಾಡಲು ಡಿಸೈಡ್ ಮಾಡಿದ್ದು, ಇದೇ ಶುಕ್ರವಾರ ಪರಭಾಷೆಗಳಲ್ಲೂ ಟ್ರೇಲರ್ ರಿಲೀಸ್ ಆಗಲಿದೆ. ನಾಳೆ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯ ಟ್ರೇಲರ್ ನ್ನು ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದಾಗಿದೆ.











































