ನಿನ್ನೆ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋಲುಂಡ ಕಾರಣಕ್ಕಾಗಿ ಬಟರ್ ಫ್ಲೈ ಪಾರುಲ್ ಯಾದವ್ ಅತೀವ ಬೇಸರದಿಂದ ಗೊಳೋ ಎಂದಿದ್ದಾರೆ. ಹೌದು.. ಭಾರತ ಈ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸುತ್ತದೆ ಎಂಬ ನಿರೀಕ್ಷೆಯನ್ನು ಕೊಟ್ಯಾಂತರ ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದರೆ ಭಾರತ ವಿಶ್ವಕಪ್ ಕನಸು ಭಗ್ನವಾದ ಹಿನ್ನೆಲೆ ಕೊಟ್ಯಾಂತರ ಅಭಿಮಾನಿಗಳಿಗೆ ನಿನ್ನೆ ದುಃಖದ ದಿನ ಕೂಡ. ಈ ಹಿನ್ನೆಲೆಯಲ್ಲಿಯೇ ಪಾರುಲ್ ಯಾದವ್ ಕೂಡ ವಿಷಾಧ ವ್ಯಕ್ತಪಡಿಸಿದ್ದಾರೆ.
https://twitter.com/TheParulYadav/status/1148956274228252672
ಇನ್ನು ಜೀವನದಲ್ಲಿ ನಾನು ಎಂದೂ ಕ್ರಿಕೆಟ್ ನೋಡಲ್ಲ. ನನಗೆ ಅತೀವ ನಿರಾಸೆಯಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ವೀಡಿಯೊ ಜತೆಗೆ ಕಣ್ಣೀರಿನ ಇಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಸಾಕಷ್ಟು ಮೆಚ್ಚುಗೆಯ ಹಾಗೂ ತಮಾಷೆಯ ಕಾಮೆಂಟುಗಳು ಬರಲು ಪ್ರಾರಂಭಿಸಿವೆ. ಸದ್ಯ ಪಾರುಲ್ ಅಭಿನಯದ ಬಟರ್ ಫ್ಲೈ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.











































