ಲಂಡನ್ ನಲ್ಲಿ ಶಿವಣ್ಣ ಬರ್ತಡೇ ಸೆಲೆಬ್ರೇಷನ್!

Picture of Cinibuzz

Cinibuzz

Bureau Report

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬವಿಂದು. ಪ್ರತಿ ವರ್ಷ ಅಭಿಮಾನಿಗಳ ಜತೆ ಸೇರಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದ ಶಿವಣ‍್ಣ ಸರ್ಜರಿ ಕಾರಣದಿಂದ ಲಂಡನ್ ನಲ್ಲಿ ಬೀಡುಬಿಟ್ಟು ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಾಗಿದೆ. ಲಂಡನ್ ನಿಂದಲೇ ಫೇಸ್ ಬುಕ್ ಲೈವ್ ಗೆ ಬಂದು ಮಾತನಾಡಿರುವ ಶಿವಣ್ಣ ‘ಅಭಿಮಾನಿಗಳು ಎಷ್ಟು ಮಿಸ್ ಮಾಡಿಕೊಳ್ಳುತ್ತಿರುವಿರೋ ನಾನು ಕೂಡ ಅಭಿಮಾನಿಗಳನ್ನು ಅಷ್ಟೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ವಿಶ್ರಾಂತಿಯಲ್ಲಿರುವ ಶಿವರಾಜ್ ಕುಮಾರ್ ಹತ್ತು ದಿನಗಳ ಕಾಲ ಲಂಡನ್ ನಲ್ಲಿದ್ದು, ಇದೇ ತಿಂಗಳು 23ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಲಂಡನ್ ನಿಂದ ಬಂದ ಬಳಿಕ ಅಭಿಮಾನಿಗಳನ್ನು ಭೇಟಿಯಾಗುವುದಾಗಿಯೂ ಭರವಸೆ ನೀಡಿದ್ದಾರೆ. ಇನ್ನು ಲಂಡನ್ ನಲ್ಲಿಯೇ ಪತ್ನಿ ಗೀತಾ, ಮಗಳು ನಿವೇದಿತಾ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ಶಿವಣ್ಣ ಬ್ಯಾಂಡೇಜ್ ಹಾಕಿಕೊಂಡ ಕೈನಲ್ಲಿಯೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶಿವಣ್ಣ ಜನ್ಮದಿನದ ಪ್ರಯುಕ್ತ ಭಜರಂಗಿ 2, ಆಯುಷ್ಮಾನ್ ಭವ ಸೇರಿದಂತೆ ಸಾಕಷ್ಟು ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿದ್ದಲ್ಲದೇ ಅನೌನ್ಸ್ ಕೂಡ ಆಗಿದೆ.

ಇನ್ನಷ್ಟು ಓದಿರಿ

Scroll to Top