ಶಿವರಾಜ್ ಕುಮಾರ್ ಆಯುಷ್ಮಾನ್ ಭವ ಪೋಸ್ಟರ್ ರಿಲೀಸ್!

Picture of Cinibuzz

Cinibuzz

Bureau Report

ಇಂದು ಶಿವರಾಜ್ ಕುಮಾರ್ ಹುಟ್ಟುಹುಬ್ಬದ ಅಂಗವಾಗಿ ಅವರ ಹೊಸ ಸಿನಿಮಾ ಆಯುಷ್ಮಾನ್ ಭವ ಅನೌನ್ಸ್ ಆಗಿದೆ. ಈ ಚಿತ್ರವನ್ನು ಪಿ. ವಾಸು ನಿರ್ದೇಶನ ಮಾಡಲಿದ್ದಾರೆ. ಇಂದು ಸಿನಿಮಾ ಘೋಷಣೆಯ ಜತೆಗೆ ಚಿತ್ರದ ಪೋಸ್ಟರೊಂದನ್ನು ಸಹ ಬಿಡುಗಡೆ ಮಾಡಲಾಗಿದೆ.

https://twitter.com/dyogish/status/1149386700524646401

ಈ ಚಿತ್ರಕ್ಕೆ ರಚಿತಾರಾಮ್ ನಾಯಕಿಯಾಗಿದ್ದು, ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ರಚಿತಾ ತೆರೆ ಹಂಚಿಕೊಳ್ಳಲಿದ್ದಾರೆ. ಆಯುಷ್ಮಾನ್ ಸಿನಿಮಾವನ್ನು ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಿದ್ದು, ಗುರುಕಿರಣ್ ಸಂಗೀತ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಚಿತ್ರಕ್ಕಿದೆ.  ಈ ಹಿಂದೆ ಶಿವಲಿಂಗ ಚಿತ್ರದ ಮೂಲಕ ಒಂದಾಗಿದ್ದ ಪಿ.ವಾಸು ಶಿವಣ್ಣ ಜೋಡಿ ಆಯುಷ್ಮಾನ್ ಭವ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top