ಇಂಗ್ಲೆಂಡ್ ಬ್ಯೂಟಿ ಆ್ಯಮಿ ಜಾಕ್ಸನ್ ಸದ್ಯ ತಾಯ್ತನದ ಸಿಹಿ ಕ್ಷಣದಲ್ಲಿದ್ದಾರೆ. ಪ್ರೆಗ್ನೆಂಟ್ ಎಂದು ಕನ್ ಫರ್ಮ್ ಆಗುತ್ತಿದ್ದಂತೆ ಸದಾ ತನ್ನ ಮಗುವಿನ ಕುರಿತಾಗಿಯೇ ಕನಸು ಕಾಣುತ್ತಿರುವ ಆ್ಯಮಿ ತನ್ನ ಬೇಬಿ ಬಂಪ್ ಫೋಟೋಗಳನ್ನು ತಪ್ಪದೇ ಇನ್ ಸ್ಟಾಗ್ರಾಮಿಗೂ ಶೇರ್ ಮಾಡುತ್ತಲೇ ಇದ್ದಾರೆ. ಸದ್ಯ ಆ್ಯಮಿ ಏಳು ತಿಂಗಳ ಗರ್ಭವತಿಯಾಗಿದ್ದು, ಬಹುಕಾಲದ ಗೆಳೆಯ ಜಾರ್ಜ್ ಪನಾಯೋಟವ್ ಜತೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಆ್ಯಮಿ ತನ್ನ ಬಹುಕಾಲದ ಗೆಳೆಯ ಜಾರ್ಜ್ ಪನಾಯೋಟವ್ ಅವರನ್ನು ಮದುವೆಯಾಗುವುದಾಗಿ ಹೊಸ ವಿಚಾರವನ್ನು ಶೇರ್ ಮಾಡಿದ್ದಾರೆ. ಇಟಲಿಯಲ್ಲಿ ವಿವಾಹವಾಗಲು ಬಯಸಿರುವ ಆಮಿ ಜಾಕ್ಸನ್, ತಾವು ಮದುವೆ ಮಾಡಿಕೊಂಡ ನಂತರ ಮಗುವನ್ನು ಬರ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ವಿಷಯವನ್ನು ಸ್ವತಃ ಆಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.











































