ಡಿಚ್ಕಿ ಡಿಸೈನ್ ಟ್ರೇಲರ್ ಬಿಡುಗಡೆ!

Picture of Cinibuzz

Cinibuzz

Bureau Report

ಸದ್ಯ ಡಿಚ್ಕಿ ಡಿಸೈನ್ ಎಂಬ ಹೆಸರಿನ ಹೊಸಬರ ಸಿನಿಮಾ ಚಂದನವನದಲ್ಲಿ ಗಮನ ಸೆಳೆಯುತ್ತಿದೆ. ಹೊಸತರದ ಟೀಸರ್, ಹಿಪ್ ಹಾಪ್ ಸಾಂಗ್ ಮೂಲಕ ಸದ್ದು ಮಾಡುತ್ತಿದ್ದ ಡಿಚ್ಕಿ ಡಿಸೈನ್ ಸದ್ಯ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಹೊಸಬರ ಕಾಮಿಡಿ ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರವನ್ನು ರಣ ಚಂದು ನಟನೆಯ ಜತೆಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ನಿಮಿಕಾ ರತ್ನಾಕರ್ ನಾಯಕಿಯಾಗಿ ಜತೆಯಾಗಿದ್ದಾರೆ.

ಡಿಚ್ಕಿ ಡಿಸೈನ್ ಟ್ರೇಲರ್ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಹಳ್ಳಿ ಹೈದ ಬೆಂಗಲೂರಿಗೆ ಬಂದ ಮೇಲೆ ಏನಾಗುತ್ತದೆ. ಇಲ್ಲಿನ ವಾತಾವರಣ ಅವನ ಬದುಕನ್ನ ಹೇಗೆಲ್ಲಾ ಬದಲಾಯಿಸುತ್ತದೆ ಎನ್ನುವುದನ್ನು ಮನರಂಜನಾತ್ಮಕವಾಗಿ ತೋರಿಸಲಾಗಿದೆ. ಈ ಚಿತ್ರವನ್ನು ಗೋಲ್ಡನ್ ಲೆನ್ಸ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top