ಕುರುಕ್ಷೇತ್ರ ಬಿಡುಗಡೆಗೆ ಕೌಂಟ್ ಡೌನ್!

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಮೊದಲು ನಿರ್ಮಾಪಕ ಮುನಿರತ್ನ ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿದ್ದರು.

ಇದೀಗ ಕುರುಕ್ಷೇತ್ರ ಹವಾ ಜೋರಾಗುತ್ತಿದದಂತೆ ಒಂದು ವಾರದ ಮುನ್ನವೇ ದರ್ಶನ ನೀಡಲು ಚಿತ್ರತಂಡ ನಿರ್ಧರಿಸಿದೆ. ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಕುರುಕ್ಷೇತ್ರ ಐದು ಭಾಷೆಗಳಲ್ಲಿ ಪ್ರಪಂಚದಾದ್ಯಂತ 2ಡಿ ಮತ್ತು 3ಡಿ ವರ್ಷನ್ ನಲ್ಲಿ ಆಗಸ್ಟ್ 2ರಂದು ಬಿಡುಗಡೆಯಾಗಲಿದೆ.

ಇನ್ನಷ್ಟು ಓದಿರಿ

Scroll to Top