ಶಿವಸೈನ್ಯದಿಂದ ಮಹಾ ಕಲಾವಿದ ಆಲ್ಬಂ ಬಿಡುಗಡೆ!

Picture of Cinibuzz

Cinibuzz

Bureau Report

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ 57ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶಿವಸೈನ್ಯ ತಂಡ ಶಿವಣ್ಣನವರ ಆಲ್ಬಂ ಸಾಂಗ್ ಬಿಡುಗಡೆ ಮಾಡಿದೆ. ಶಿವರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿಯೇ ಮಹಾನ್ ಕಲಾವಿದ ಎಂಬ ಆ್ಯಂಥಮ್ ಆಲ್ಬಂ ಸಾಂಗನ್ನು ಪಿ.ಆರ್.ಕೆ. ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದೆ. ಈ ಆಲ್ಬಂಗೆ ಪ್ರಮೋದ್ ಜಾಯಿಸ್ ಸಾಹಿತ್ಯ ರಚಿಸಿದ್ದು, ಚೇತನ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜಿತ್ ಹರಿ ಈ ಹಾಡಿಗೆ ಆ್ಯನಿಮೇಷನ್ ಮಾಡಿದ್ದಾರೆ.

ಅಭಿಷೇಕ್ ಎಂ, ಮಂಜುನಾಥ್ ಗೌಡ, ಕನಸು ಕಿರಣ್, ಸಂದೀಪ್, ನಿತಿನ್, ಕಶ್ಯಪ್ ಸಿಂಹ, ರವಿಕಿರಣ್, ಅಶೋಕ್, ಪ್ರವೀಣ್ ಮತ್ತಿತ್ತರರು ಶಿವಸೈನ್ಯ ತಂಡದ ಪ್ರತಿನಿಧಿಗಳಾಗಿದ್ದಾರೆ. ಅದೃಷ್ಟವಶಾತ್ ಇತ್ತೀಚಿಗಷ್ಟೇ ಶಿವಸೈನ್ಯದ ಅಭಿಷೇಕ್ ಅಕಾಲಿಕ ಮರಣ ಹೊಂದಿದ್ದರು.

ಇನ್ನಷ್ಟು ಓದಿರಿ

Scroll to Top