ಟೈಮ್ ರೈಡರ್ಸ್ ನಲ್ಲಿ ಮಲ್ಲಿಕಾ ಶೆರಾವತ್!

Picture of Cinibuzz

Cinibuzz

Bureau Report

ಬಿ ಟೌನಿನ ಮಾದಕ ಸುಂದರಿ ಮಲ್ಲಿಕಾ ಶೆರಾವತ್ ಟೈಮ್ ರೈಡರ್ಸ್ ಎಂಬ ಅಂತರಾಷ್ಟ್ರೀಯ ಸಿನಿಮಾದಲ್ಲಿ ನಟಿಸುತ್ತಿದ್ದು, ಆಕೆಯ ರಾಜಕುಮಾರಿ ಲುಕ್ಕಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯೋಧ ರಾಜಕುಮಾರಿಯ ದಿರಿಸಿನಲ್ಲಿರುವ ಫೋಟೋವನ್ನು ಶೇರ್ ಮಾಡಿರುವ ಮಲ್ಲಿಕಾ ಶೆರಾವತ್ ‘ ‘ಟೈಮ್ ರೈಡರ್ಸ್’ ಚಿತ್ರದಲ್ಲಿ ಯೋಧ ರಾಜಕುಮಾರಿಯ ಪಾತ್ರ ಮಾಡಲು ನಾನು ರೆಡಿ’ ಎಂದು ಬರೆದುಕೊಂಡಿದ್ದಾರೆ.

ಪುರಾತನ ಕಾಲದ ಟ್ರೆಡಿಷನಲ್ ಡ್ರೆಸ್ ಧರಿಸಿರುವ ಮಲ್ಲಿಕಾ, ತಲೆಗೆ ಕಿರೀಟವನ್ನು ಧರಿಸಿದ್ದಾರೆ. ಮಲ್ಲಿಕಾ ಶೆರಾವತ್ ನ ಸಾಂಪ್ರದಾಯಿಕ ಉಡುಗೆಯನ್ನು ಪ್ರತಿಯೊಬ್ಬರು ಇಷ್ಟಪಟ್ಟಿದ್ದಾರೆ. ಟೈಮ್ ರೈಡರ್ಸ್ ಸಿನಿಮಾವನ್ನು ಏಕಾ ಕಪೂರ್ ನಿರ್ಮಾಣ ಮಾಡುತ್ತಿದ್ದು, ಇದು ಹಾರರ್ ಕಾಮಿಡಿ ವೆಬ್ ಸಿರೀಸ್ ಆಗಿರಲಿದೆ.

ಇನ್ನಷ್ಟು ಓದಿರಿ

Scroll to Top