ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ದಂತಹ ಹೊಸ ಅಲೆ ಸಿನಿಮಾಗಳನ್ನು ನಿರ್ದೇಶಿಸಿದ್ದ ಸತ್ಯಪ್ರಕಾಶ್ ಇದೀಗ ಕಮರ್ಶಿಯಲ್ ಚಿತ್ರಕ್ಕಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಈ ಚಿತ್ರವು ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿದೆ.

“ನಾನು ಕಳೆದ ಎರಡು ಸಿನಿಮಾಗಳನ್ನು ಹೊಸ ರೀತಿಯ ಸಬ್ಜೆಕ್ಟ್ ಗಳ ಮೂಲಕ ಮಾಡಿದ್ದೆ. ಈಗ ಮೂರನೇ ಸಿನಿಮಾ ಕೈಗೆತ್ತಿಕೊಂಡಿದ್ದು, ಅದರ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದೆನೆ. ಹಿಂದಿನ ಎರಡೂ ಸಿನಿಮಾಗಳು ಕ್ಲಾಸ್ ಪ್ರೇಕ್ಷಕರು ಇಷ್ಟಪಡುವಂತಿತ್ತು. ಈ ಬಾರಿ ನಾನು ಪಕ್ಕಾ ಕರ್ಮಷಿಯಲ್ ಸಿನಿಮಾ ಮಾಡುತ್ತೇನೆ. ಅದೇ ನಿಟ್ಟಿನಲ್ಲಿ ಕಥೆ ಬರೆಯುತ್ತಿದ್ದು, ಪುನೀತ್ ರಾಜ್ ಕುಮಾರ್ ಅವರಿಗಾಗಿಯೇ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಈಗಾಗಲೇ ಪವರ್ ಸ್ಟಾರ್ ಒನ್ ಲೈನ್ ಕೇಳಿದ್ದು, ಪೂರ್ಣ ಪ್ರಮಾಣದಲ್ಲಿ ಚಿತ್ರಕತೆಯನ್ನು ಮಾಡಿಕೊಂಡು ಬನ್ನಿ ಎಂಬುದಾಗಿಯೂ ತಿಳಿಸಿದ್ದಾರೆ. ಲಂಡನ್ ನಿಂದ ಪುನೀತ್ ರಾಜ್ ಕುಮಾರ್ ಹಿಂತಿರುಗುತ್ತಿದ್ದಂತೆ ಅವರನ್ನು ಭೇಟಿ ಮಾಡಲಿದ್ದೇನೆ” ಎನ್ನುತ್ತಾರೆ ಸತ್ಯಪ್ರಕಾಶ್.











































