ಸಮ್ಮೋಹನಂ ಖ್ಯಾತಿಯ ಅಮಿತ್ ಪುರೋಹಿತ್ ವಿಧಿವಶ!

Picture of Cinibuzz

Cinibuzz

Bureau Report

ಟಾಲಿವುಡ್ ನ ಸಮ್ಮೋಹನಂ ಖ್ಯಾತಿಯ ಅಮಿತ್ ಪುರೋಹಿತ್ ವಿಧಿವಶರಾಗಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಲು ಮಾಡಿದ್ದ ಈ ಚಿತ್ರದಲ್ಲಿ ಅಮಿತ್ ಪುರೋಹಿತ್ ಅದಿತಿ ರಾವ್ ಪ್ರಿಯಕರನಾಗಿ ನಟಿಸಿದ್ದರು. ಅಮಿತ್ ಪುರೋಹಿತ್ ನಿಧನವನ್ನು ಚಿತ್ರದ ನಿರ್ದೇಶಕ ಇಂದ್ರಗಂಟಿ ಮೋಹನ್ ಟ್ವಿಟರ್ ಮೂಲಕ ತಿಳಿಸಿ ಸಂತಾಪ ಸೂಚಿಸಿದ್ದಾರೆ.

“ಅಮಿತ್ ಪುರೋಹಿತ್ ಸಾವು ನನ್ನನ್ನು ಶಾಕ್ ಗೆ ಗುರಿ ಮಾಡಿದೆ. ಅಮಿತ್ ತುಂಬಾ ಸ್ನೇಹಶೀಲ ಸ್ವಭಾವದವರು. ಪ್ರತಿಯೊಂದು ಸೀನಿಗೂ ಶೇಕಡಾ ನೂರರಷ್ಟು ನ್ಯಾಯ ಸಲ್ಲಿಸುತ್ತಿದ್ದರು. ಅವರ ದಿಢೀರ್ ಸಾವು ಟಾಲಿವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top