ಟ್ರೋಲ್ ಗಳಿಗೆ ಕೇರ್ ಮಾಡದ ದಿಶಾ ಪಟಾನಿ!

Picture of Cinibuzz

Cinibuzz

Bureau Report

ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡಲಿದ್ದರೆ ಹೇಗೆ? ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಹುರಿದು ಹುರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿತ್ತಾರೆ. ಸದ್ಯ ಅವ್ಯಾವುದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ಸೆಲೆಬ್ರೆಟಿಗಳ ಪೈಕಿ ದಿಶಾ ಪಟಾನಿ ಪ್ರಮುಖರಾಗಿದ್ದಾರೆ.

ಇನ್ಸ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 22 ಲಕ್ಷ ಹಿಂಬಾಲಕರನ್ನು ಹೊಂದಿರುವ ದಿಶಾ, ತಮ್ಮ ಮೇಲೆ ಮಾಡುವ ಟ್ರೋಲಿಗರು ಟ್ರೋಲು, ಕಮೆಂಟಿಗರ ಕಮೆಂಟುಗಳಿಗೆ ಸಿಟ್ಟಾಗುವ ಬದಲು ನಕ್ಕು ಸುಮ್ಮನಾಗುತ್ತಾರಂತೆ. ಇತ್ತೀಚಿಗೆ ಡೆಕ್ಕನ್ ಕ್ರಾನಿಕಲ್ ಗೆ ನೀಡಿರುವ ಸಂದರ್ಶನವೊಂದರಲ್ಲಿ ಇಂತಹ ಟ್ರೋಲ್ ಗಳ ಕುರಿತಾಗಿ ಮಾತನಾಡಿರುವ ದಿಶಾ, ‘ನೀವು ಟ್ರೋಲ್ ಗಳನ್ನು ಡೀಲ್ ಮಾಡಬೇಕೆಂದರೆ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದು. ನಾನಂತೂ ಟ್ರೋಲ್ ಗಳನ್ನು ನೋಡಿದರೆ ಸಿಕ್ಕಾಪಟ್ಟೆ ನಕ್ಕುಬಿಡುತ್ತೇನೆ. ಯಾಕೆಂದರೆ ಕೆಲವೊಮ್ಮೆ ಅವುಗಳು ತಮಾಷೆಯಾಗಿರುತ್ತವೆ. ಯಾರೂ ಕೂಡ ಪರಿಪೂರ್ಣರಲ್ಲ. ಆದ್ದರಿಂದ ಟ್ರೋಲ್ ಗಳನ್ನು ನೋಡಿ ಮನಸಾರೆ ನಗುವುದು ಒಳ್ಳೆಯದು’ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ಓದಿರಿ

Scroll to Top