ಕರೀನಾ ಬ್ಯಾಗ್ ಮೇಲೆ ಅಭಿಮಾನಿಗಳ ಕಣ್ಣು!

Picture of Cinibuzz

Cinibuzz

Bureau Report

ಬಾಲಿವುಡ್ ಸುಂದರಿ ಕರೀನಾ ಕಪೂರ್ ಲಂಡನ್ ನಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ತಮ್ಮ ವಿಹಾರದ ಕೆಲ ಫೋಟೋಗಳನ್ನು ಇನ್ ಸ್ಟಾಗ್ರಾಂಗೆ ಶೇರ್ ಮಾಡಿದ್ದ ಕರೀನಾ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.

https://www.instagram.com/p/BzTB_xhF9e6/?utm_source=ig_web_copy_link

ಆ ಫೋಟೋದಲ್ಲಿ ಕರೀನಾಳನ್ನು ಮೆಚ್ಚಿದ್ದ ಅಭಿಮಾನಿಗಳು ಆಕೆ ತಗುಲಿ ಹಾಕಿಕೊಂಡಿದ್ದ ಸ್ಲಿಂಗ್ ಬ್ಯಾಗ್ ಮೇಲೆ ಕಣ್ಣು ಹಾಕಿದ್ದಲ್ಲದೇ ಆಶ‍್ಚರ್ಯಚಕಿತರಾಗಿಯೂ ಆಕೆಯ ಬ್ಯಾಗನ್ನು ಗಮನಿಸಿದ್ದಾರೆ. ಮಾಮೂಲಿ ಬ್ಯಾಗಾಗಿದ್ದರೆ ಅಷ್ಟೇನೂ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಕರೀನಾ ಬರೋಬ್ಬರಿ ಮೂರುವರೆ ಲಕ್ಷ ಮೊತ್ತದ ದುಬಾರಿ ಬ್ಯಾಗನ್ನು ತಗುಲಿ ಹಾಕಿಕೊಂಡಿರೋದೆ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ಇನ್ನಷ್ಟು ಓದಿರಿ

Scroll to Top