ಟಾಲಿವುಡ್ ನಿಂದ ಪ್ರಶಾಂತ್ ನೀಲ್ ಗೆ ಆಫರ್!

Picture of Cinibuzz

Cinibuzz

Bureau Report

ಕೆಜಿಎಫ್ 2 ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ಚಂದನವನದ ಯುವ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಟಾಲಿವುಡ್ ನಿಂದ ಬಹುದೊಡ್ಡ ಆಫರ್ ನೀಡಲಾಗಿದೆಯಂತೆ. ಯೆಸ್… ಜೂನಿಯರ್ ಎನ್.ಟಿ.ಆರ್. ನಾಯಕನಾಗಿ ನಟಿಸಲಿರುವ ಅಪ್ ಕಮಿಂಗ್ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲು ಪ್ರಶಾಂತ್ ನೀಲ್ ಗೆ ಬುಲಾವ್ ಆಗಿದೆಯಂತೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಹೊಸ ಚಿತ್ರ ತಯಾರಾಗುವುದು ನಿಕ್ಕಿಯಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ನ ನಿರ್ಮಾಪಕರಲ್ಲಿ ಒಬ್ಬರಾಗಿರುವ ನವೀನ್ ಯುರ್ನೇನಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, “ಕೆಜಿಎಫ್ ಸಿನಿಮಾ ಎನ್‍ಟಿಆರ್‌ಗೆ ತುಂಬಾ ಇಷ್ಟವಾಯಿತು. ಆ ಚಿತ್ರದ ನಿರ್ದೇಶಕರ ಜತೆಗೆ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯವನ್ನು ನಮ್ಮೊಂದಿಗೆ ಶೇರ್ ಮಾಡಿದ್ದಾರೆ” ಎಂದರು. ಎಲ್ಲ ಅಂದುಕೊಂಡಂತಾದರೆ 2020ರ ಅಂತ್ಯಕ್ಕೆ ಸಿನಿಮಾ ಸೆಟ್ಟೇರುವುದು ಪಕ್ಕಾ ಎನ್ನಲಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top