ಧೋನಿ ನಿವೃತ್ತಿ ಕುರಿತಾಗಿ ಲತಾ ಮಂಗೇಶ್ವರ್ ಟ್ವೀಟ್ ವೈರಲ್!

Picture of Cinibuzz

Cinibuzz

Bureau Report

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಮಾಡಿರುವ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು ನಿವೃತ್ತಿಯ ಹಿನ್ನೆಲೆಯಲ್ಲಿ ಲತಾ ಮಂಗೇಶ್ವರ್ ಧೋನಿಗೆ ಟ್ವೀಟ್ ಮಾಡಿದ್ದು, “ಎಂ ಎಸ್ ಧೋನಿ ಜೀ ನಮಸ್ಕಾರ. ನೀವು ನಿವೃತ್ತಿ ಘೋಷಿಸಲಿದ್ದೀರಿ ಎಂಬ ಸುದ್ದಿ ನನ್ನ ಕಿವಿಗೆ ಬಿತ್ತು. ದಯವಿಟ್ಟು ಆ ರೀತಿ ಮಾಡಬೇಡಿ. ದೇಶಕ್ಕೆ ನಿಮ್ಮ ಆಟ ಅಗತ್ಯವಾಗಿ ಬೇಕಿದೆ. ಇದು ನನ್ನ ಬೇಡಿಕೆ ಕೂಡ. ನಿವೃತ್ತಿ ಎಂಬ ಪದವನ್ನು ನಿಮ್ಮ ಮನಸ್ಸಿನಲ್ಲೂ ಸುಳಿಯಲು ಬಿಡಬೇಡಿ” ಎಂದಿರುವ ಲತಾ ಅವರು ಮಹೇಂದ್ರ ಸಿಂಗ್ ಧೋನಿಯವರಿಗೂ ಟ್ಯಾಗ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top