ಇತ್ತೀಚಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಲಂಡನ್ನಿಗೆ ತೆರಳಿದ್ದರು. ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿಯೂ ನೆರವೇರಿತ್ತು. ಚಿಕಿತ್ಸೆಯ ಬಳಿ ಶಿವಣ್ಣ ಲಂಡನ್ ನಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇದೀಗ ಭಾರತ ಕ್ರಿಕೆಟ್ ತಂಡದ ಎವರ್ ಗ್ರೀನ್ ಪ್ಲೇಯರ್ ಕನ್ನಡಿಗ ಅನಿಲ್ ಕುಂಬ್ಳೆ ಶಿವಣ್ಣ ಅವರನ್ನು ಲಂಡನ್ ನಲ್ಲಿಯೇ ಭೇಟಿಯಾಗಿದ್ದಾರೆ.

ಯೆಸ್.. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಜತೆಗೆ ಶಿವಣ್ಣ ಅವರ ಆರೋಗ್ಯವನ್ನು ಅನಿಲ್ ಕುಂಬ್ಳೆ ವಿಚಾರಿಸಿದ್ದಾರೆ. ಈ ಕುರಿತು ಶಿವರಾಜ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆ ಸಂತಸದ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದಲ್ಲದೇ,
“ಕ್ರಿಕೆಟ್ ಅಂದ್ರೆ ನನಗೆ ಇಷ್ಟ, ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ ಸರ್ ಪ್ರೈಸ್ ಆಗಿ ಸಿಕ್ಕ ನನ್ನ ನೆಚ್ಚಿನ ಆಟಗಾರ, ನನ್ನ ಒಳ್ಳೆಯ ಸ್ನೇಹಿತ ಅನಿಲ್ ಕುಂಬ್ಳೆಯವರನ್ನು ಭೇಟಿ ಮಾಡಿರುವುದು ನನಗೆ ತುಂಬಾ ಖುಷಿಕೊಟ್ಟಿದೆ” ಎಂದು ಬರೆದುಕೊಂಡಿದ್ದಾರೆ.











































