ಪೈಲ್ವಾನ್ ಲೇಟೆಸ್ಟ್ ಪೋಸ್ಟರ್ ಬಿಡುಗಡೆ!

Picture of Cinibuzz

Cinibuzz

Bureau Report

ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಬಹು ಬೇಡಿಕೆಯ ಸಿನಿಮಾ ಪೈಲ್ವಾನ್. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್, ಥೀಮ್ ಸಾಂಗ್ ಬಿಡುಗಡೆಯಾಗಿ ಸಿನಿಮಾ  ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತಲೇ ಇದೆ. ಇದೀಗ ಪೈಲ್ವಾನ್ ನ ಕೆಲವೊಂದು ಪೋಸ್ಟರ್ ಗಳು ಬಿಡುಗಡೆಯಾಗಿ ಅಭಿಮಾನಿಗಳು ಮತ್ತಷ್ಟು ಖುಷಿ ತಂದಿದೆ.

ಯೆಸ್… ಪೈಲ್ವಾನ್ ನಾಯಕಿ ಆಕಾಂಕ್ಷಾ ಮತ್ತು ಸುದೀಪ್ ಅವರ ಪೋಸ್ಟರ್ ರೊಂದು ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಆಕಾಂಕ್ಷಾ ಸುದೀಪ್ ಅವರ ಬಾಯಿಯ ಬಳಿ ಕೈಯಿಟ್ಟು ಮುತ್ತಿಡುತ್ತಿದ್ದಾರೆ. ಮತ್ತೊಂದು ಪೋಸ್ಟರ್ ನಲ್ಲಿ ಪೈಲ್ವಾನ್  ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಸುದೀಪ್ ಇರುವ ಮತ್ತೊಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಪೈಲ್ವಾನ್ ಚಿತ್ರವನ್ನು ಗಜಕೇಸರಿ, ಹೆಬ್ಬಲಿ ಖ್ಯಾತಿಯ ಕೃಷ್ಣ ನಿರ್ದೆಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top