ಕ್ರಷ್ ಮೋಷನ್ ಪೋಸ್ಟರ್ ರಿಲೀಸ್!

Picture of Cinibuzz

Cinibuzz

Bureau Report

ಅಭಿ ಎನ್. ನಿರ್ದೇಶನ ಮಾಡಿರುವ ಕ್ರಷ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಪೇಸ್ ಡಿಜಿಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರಿಂದ ಈ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಕ್ರಷ್ ಗೆ ರಂಗಬಿರಂಗಿ ಖ್ಯಾತಿಯ ಆರ್ಯ ಮತ್ತು ನಾಯಕಿಯಾಗಿ ಪ್ರತಿಭಾ ಅಭಿನಯಿಸಿದ್ದಾರೆ.

ಕ್ರಷ್ ಎಂಬ ಟೈಟಲ್ ಕೇಳುತ್ತಿದ್ದಂತೆ ಇದೊಂದು ಪಕ್ಕಾ ಲವ್ ಸ್ಟೋರಿ ಎಂದೆನಿಸುತ್ತದೆ. ಅದನ್ನು ವಿಭಿನ್ನ ಕಥಾಹಂದರದ ಮೂಲಕ ನಿರ್ದೆಶಕರು ಹೆಣೆದಿದ್ದಾರೆ. ಚಿತ್ರದಲ್ಲಿ ಹಿರಿಯ ನಟಿ ಅಭಿನಯ ನಾಯಕಿಯ ಅಮ್ಮನಾಗಿ, ಅದರಲ್ಲೂ 25 ವರ್ಷದ ಯುವತಿ ಹಾಗೂ 75 ವರ್ಷದ ವೃದ್ಧೆ ಎರಡೂ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಓದಿರಿ

Scroll to Top