ಚೊಚ್ಚಲ ಚಿತ್ರದಲ್ಲಿಯೇ ಬೆತ್ತಲಾದ ಆನಂದ ದೇವರಕೊಂಡ!

Picture of Cinibuzz

Cinibuzz

Bureau Report

ವಿಜಯ್ ದೇವರಕೊಂಡ ಸಹೋದರ ಆನಂದ ದೇವರಕೊಂಡ ಹಾಗೂ ಶಿವಾತ್ಮಿಕ ಅಭಿನಯದ ಚೊಚ್ಚಲ ಚಿತ್ರ ದೊರಸಾನಿ ನಿನ್ನೆ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ತೆಲುಗು ತಾರೆಯರೆಲ್ಲರೂ ಆನಂದ್ ದೇವರಕೊಂಡ ಮತ್ತು ಶಿವಾತ್ಮಿಕ ನಟನೆಗೆ ಮನಸೋತು ಅಭಿನಂದಿಸಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ಪ್ರಿಪರೇಷನ್ ಮಾಡಿಕೊಂಡಿದ್ದ ಆನಂದ್ ದೇವರಕೊಂಡ, ದೊರೆಸಾನಿಗೆ ಅಗತ್ಯವೆಂಬಂತೆ ಚಿತ್ರದ ದೃಶ್ಯವೊಂದರಲ್ಲಿ ಬೆತ್ತಲಾಗಿಯೂ ಕಾಣಿಸಿಕೊಂಡಿದ್ದಾರಂತೆ. ಚೊಚ್ಚಲ ಚಿತ್ರದಲ್ಲಿಯೇ ಇಷ್ಟರಮಟ್ಟಿಗೆ ಆನಂದ್ ಸಿನಿಮಾದಲ್ಲಿ ತೊಡಗಿಕೊಂಡಿರೋದು ತೆಲುಗು ನಗರದಲ್ಲಿ ಸದ್ಯಕ್ಕೆ ಹಾಟ್ ಟಾಕ್ ಕೂಡ.

ರೊಮ್ಯಾಂಟಿಕ್ ಡ್ರಾಮಾ ಜಾನರ್ ನ ಸಿನಿಮಾ ಇದಾಗಿದ್ದು, ಶ್ರೀಮಂತನ ಮಗಳು ಆಳನ್ನು ಲವ್ ಮಾಡೋದೇ ಚಿತ್ರದ ಎಳೆ. ದೊರೆಸಾನಿಗೆ ಮಹೇಂದ್ರ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಾರಾಂಗಣದಲ್ಲಿ ಕಿಶೋರ್, ಪ್ರದೀಪ್, ವಿನಯ್ ವರ್ಮಾ, ಶರಣ್ಯಾ ಪ್ರಮುಖದ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top