ನಮ್ಮ ರಾಜ್ಯದಲ್ಲಿ ಶೂಟ್ ಮಾಡದಿದ್ದರೂ ಇದು ನನ್ನ ಪಾಲಿಗೆ ಕನ್ನಡ ಸಿನಿಮಾ: ರಶ್ಮಿಕಾ ಮಂದಣ್ಣ

Picture of Cinibuzz

Cinibuzz

Bureau Report

ತೆಲುಗಿನ ಗೀತಗೋವಿಂದಂ ನಲ್ಲಿ ಒಂದಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಡಿಯರ್ ಕಾಮ್ರೇಡ್ ಮೂಲಕ ಮತ್ತೆ ಜತೆಯಾಗಿದ್ದಾರೆ. ಈ ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ಚಿತ್ರತಂಡ ಮಾಧ್ಯಮಗಳೊಂದಿಗೆ ಡಿಯರ್ ಕಾಮ್ರೇಡ್ ಅನುಭವಗಳನ್ನು ಹಂಚಿಕೊಂಡರು.

ಡಿಯರ್ ಕಾಮ್ರೇಡ್ ನಲ್ಲಿ ನಟಿಸಿರುವ ಕೊಡಗಿನ ರಶ್ಮಿಕಾ ಮಾತನಾಡಿ “ಕನ್ನಡದಲ್ಲೂ ರಿಲೀಸ್ ಆಗುತ್ತಿರುವ ಕಾರಣ ಸ್ವತಃ ನಾನೇ ಡಬ್ಬಿಂಗ್ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಈ ಚಿತ್ರವನ್ನು ಚಿತ್ರೀಕರಿಸದಿದ್ದರೂ ಇದು ನನ್ನ ಪಾಲಿಗೆ ಕನ್ನಡ ಸಿನಿಮಾದಂತೆಯೇ!” ಎಂದಿದ್ದಾರೆ. ಇನ್ನು ಕಿಸ್ಸಿಂಗ್ ಸೀನುಗಳ ಬಗ್ಗೆಯೂ ರಶ್ಮಿಕಾ ಮಾತನಾಡಿ, ಇದೊಂದು ಭಿನ್ನವಾದ ಸಬ್ಜೆಕ್ಟ್ ಇರುವ ಸಿನಿಮಾ. ಎಲ್ಲಾ ರೀತಿಯ ಎಮೋಶನ್ಸ್ ಗಳಿವೆ. ಬರೀ ಕಿಸ್ಸಿಂಗ್ ಸೀನ್ ಗಳ ಬಗ್ಗೆ ಮಾತನಾಡಿದರೆ ಹೇಗೆ? ಚಿತ್ರದಲ್ಲಿ ಬರುವ ಭಾವನಾತ್ಮಕ ಅಂಶಗಳಲ್ಲಿ ಅದೂ ಒಂದು ಎಂದು ತಿಳಿದರೆ ಸಾಕಲ್ಲವೇ ಎಂದರು.

ಇನ್ನಷ್ಟು ಓದಿರಿ

Scroll to Top