ಲಿಪ್ ಲಾಕ್ ಅಂತ ಕೇಳಿದರೆ ನನಗೆ ಬೇಸರವಾಗುತ್ತದೆ: ವಿಜಯ್ ದೇವರಕೊಂಡ

Picture of Cinibuzz

Cinibuzz

Bureau Report

ತೆಲುಗಿನ ಇಮ್ರಾನ್ ಹಶ್ಮಿ ಎಂದೇ ಫೇಮಸ್ ಆಗಿರುವ ವಿಜಯ್ ದೇವರಕೊಂಡ ಸಿನಿಮಾಗಳೆಂದರೆ ಒಂದಲ್ಲಾ ಒಂದು ಕಿಸ್ಸಿಂಗ್, ಲಿಪ್ ಲಾಕ್ ಸೀನುಗಳು ಕಾಮನ್ನು. ಅದು ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಂತಸ. ಮಿಕ್ಕವರಿಗೆ ಕಿಂಡಲ್ಲು. ಡಿಯರ್ ಕಾಮ್ರೇಡ್ ವಿಚಾರದಲ್ಲಿಯೂ ಅಂತಹುದೇ ಬಹಳಷ್ಟು ಚರ್ಚೆಗಳಾಗುತ್ತಿದ್ದು, ರಿಲೀಸ್ ಆದ ಟ್ರೇಲರ್ ಗಳಲ್ಲಿ ಕಂಡುಬಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕಿಸ್ಸಿಂಗ್ ಸೀನುಗಳ ಕುರಿತಾಗಿಯೇ ಬೇಕಿಲ್ಲದಂತಹ ವಿಚಾರಗಳನ್ನೂ ಮಾತನಾಡಿದ್ದರು. ಅದು ಟ್ರೋಲಿಗರಿಗೆ, ಕಮೆಂಟಿಗರಿಗೆ ಬಹುದೊಡ್ಡ ಆಹಾರ ಕೂಡ.

ಸದ್ಯ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಬಿಡುಗಡೆಯೋತ್ತರ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ವಿಜಯ್ ದೇವರಕೊಂಡ ಡಿಯರ್ ಕಾಮ್ರೇಡ್ ಕುರಿತಾಗಿ ಸಾಕಷ್ಟು ಪಾಸಿಟೀವ್ ಅಂಶಗಳನ್ನು ಹಂಚಿಕೊಂಡರು. ನಂತರ ಕಿಸ್ಸಿಂಗ್ ಸೀನ್ ಬಗ್ಗೆ ಮಾತನಾಡಿದ ಅವರು, “ಅರ್ಜುನ್ ರೆಡ್ಡಿ ನೋಡಿದ ಬಳಿಕ ಜನ ನನ್ನನ್ನು ನೋಡಿ ಭಯ ಬೀಳುವಂತಾಯಿತು. ಅದೊಂದು ಪಾತ್ರ ಎಂಬುದನ್ನೂ ಮರೆತುಬಿಟ್ಟಿದ್ದಾರೆ. ನಿಜ ಜೀವನದಲ್ಲಿ ನಾನು ಸಿಗರೇಟ್ ಸಹ ಸೇದುವುದಿಲ್ಲ. ಈಗಲೂ ಅಷ್ಟೇ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಿಸ್ಸಿಂಗ್ ಎಂದೇ ಭಾವಿಸುತ್ತಾರೆ. ಅದು ಆ ಪಾತ್ರಗಳು ಎಂದು ಯಾಕಾಗಿ ಭಾವಿಸುವುದಿಲ್ಲ. ಪಾತ್ರಗಳನ್ನು ಪಾತ್ರಗಳ ಹಾಗೆ ನೋಡಬೇಕಲ್ಲವೇ. ನಿಜ ಜೀವನಕ್ಕೆ ದಯವಿಟ್ಟು ಹೋಲಿಸಲು ಹೋಗಬೇಡಿ” ಎಂದರು. ಮೇಲಾಗಿ  “ಲಿಪ್ ಲಾಕ್ ಅಂದ್ರೆ ಏನು? ಈ ಪದವೇ ನನಗಿಷ್ಟವಾಗಲಿಲ್ಲ. ಅಳುವುದು, ಕೋಪಿಸಿಕೊಳ್ಳುವುದು, ಪ್ರೀತಿಯಿಂದ ಚುಂಬಿಸುವುದು ಇದೆಲ್ಲಾ ಮನುಷ್ಯನು ವ್ಯಕ್ತಪಡಿಸುವ ಭಾವನೆಗಳಲ್ಲವೇ. ಇದು ಲಿಪ್ಸ್ ಲಾಕಿಂಗ್ ಅಲ್ಲ. ಈ ಪದ ಕೇಳಿದಾಗ ನನಗೆ ತುಂಬಾ ಬೇಜಾರುತ್ತದೆ. ಇದೇನಿದು ಲಿಪ್ ಲಾಕ್ ಎಂದುಕೊಂಡಿದ್ದೇನೆ. ಚುಂಬನವೆಂಬುದು ಭಾವಾತ್ಮಕ ಅಂಶ. ಅದಕ್ಕೆ ಬೆಲೆ ಕೊಡೋಣ” ಎಂದರು. ಇನ್ನು “ಕಿಸ್ಸಿಂಗ್ ಸೀನ್ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯವಿಲ್ಲ. ಆಯಾ ಪಾತ್ರ ಬಯಸಿದಂತೆ ನಾವು ಮಾಡಿದ್ದೇವೆ. ಸಿನಿಮಾವನ್ನು ವಿಮರ್ಶಿಸಿ, ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಆ ಪಾತ್ರ ಹಾಗ್ಯಾಕೆ, ಹೀಗೇಕೆ ಎಂಬ ಬಗ್ಗೆ ನಾವು ವಿವರಣೆ ನೀಡಬೇಕಾಗಿಲ್ಲ. ಅದಕ್ಕೆ ನ್ಯಾಯ ಸಲ್ಲಿಸುವುದಷ್ಟೇ ನಮ್ಮ ಕೆಲಸ” ಎಂದಿದ್ದಾರೆ.

ಇನ್ನಷ್ಟು ಓದಿರಿ

Scroll to Top