ವಿಶ್ವಕಪ್ ಸೋಲು ಅಲ್ಲಗಳೆದ ವಿವೇಕ್ ಒಬೆರಾಯ್!

Picture of Cinibuzz

Cinibuzz

Bureau Report

ಇತ್ತೀಚಿಗೆ ವಿವೇಕ್ ಒಬೆರಾಯ್ ಅನಗತ್ಯ ವಿಚಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರನ್ನ ಅಣಕಿಸಿ ಟ್ವೀಟ್ ಮಾಡಿ ಫ್ಯಾನ್ಸ್ ನಿಂದ ಮುಖಕ್ಕೆ ಉಗಿಸಿಕೊಂಡಿದ್ದರು.

ಕಳೆದ ವಿಶ್ವಕಪ್ ಪಂದ್ಯದ ಸೋಲಿನ ಕುರಿತಾಗಿ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಗಳನ್ನ ಅಣಕಿಸುವ ರೀತಿಯಲ್ಲಿ GIF  ಒಂದನ್ನ ಹಾಕಿ ಟ್ವೀಟ್ ಮಾಡಿ ಮತ್ತೆ ಕಮೆಂಟಿಗರಿಗೆ ಆಹಾರವಾಗಿದ್ದಾರೆ.  ಆ GIF ನಲ್ಲಿ ಭಾರತೀಯ ಅಭಿಮಾನಿಯೊಬ್ಬರು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಇವರ ಎದುರು ಮಹಿಳೆ ಒಬ್ಬರು ಬರುತ್ತಿರೋದನ್ನ ನೋಡುತ್ತ ತನ್ನನ್ನ ತಬ್ಬಿಕೊಳ್ಳಬಹುದು ಅಂತಾ ಯೋಚಿಸುತ್ತಿರುತ್ತಾರೆ. ಆದರೆ ಆ ಮಹಿಳೆ ಆತನ ಹಿಂದೆ ನಡೆದುಕೊಂಡು ಬರುತ್ತಿರೋ ವ್ಯಕ್ತಿಯನ್ನ ತಬ್ಬಿಕೊಂಡಿದ್ದಾಳೆ. ಈ GIF  ಅನ್ನು ಅಪ್​ಲೋಡ್ ಮಾಡಿರುವ ವಿವೇಕ್ ಒಬೆರಾಯ್, ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತೀಯ ಅಭಿಮಾನಿಗಳಿಗೆ ಹೀಗಾಯಿತು! ಅಂತಾ ಅಭಿಮಾನಿಗಳ ಅಣಕಿಸಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top