ನನ್ನ ಟ್ವಿಟರ್ ಖಾತೆಯನ್ನು ಮುಂಬೈ ಪೊಲೀಸರು ಬ್ಲಾಕ್ ಮಾಡಿದ್ದಾರೆ ಎಂದು ಬಾಲಿವುಡ್ ನಟ ಪಾಯಲ್ ರೋಹ್ಟಗಿ ಆರೋಪಿಸಿದ್ದಾರೆ. ತನ್ನ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆನ್ನಲಾಗಿರುವ ಸ್ಕ್ರೀನ್ ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ‘ನಾನು ಹಿಂದೂ ನಟಿ. ಆದರೆ ಪೊಲೀಸರ ನಡೆಯಿಂದ ನನಗೆ ಭಾರತದಲ್ಲಿ ವಾಸಿಸಲು ಭಯವಾಗುತ್ತಿದೆ. ನನ್ನ ಕುಟುಂಬಸ್ಥರು ನನಗೆ ಹಿಂದೂ ಧರ್ಮದ ಪರವಾಗಿ ಮಾತನಾಡಬೇಡ ಎಂದು ಯಾಕೆ ಹೇಳುತ್ತಿದ್ದರು ಎಂಬುದು ಈಗ ಅರ್ಧವಾಗುತ್ತಿದೆ’ ಅಂತಾ ಬರೆದುಕೊಂಡಿದ್ದಾರೆ.
.@MumbaiPolice blocking every RW handle which ask them Qs
Just imagine, how many complains by Hindus they must have ignored till date@Dev_Fadnavis, @fadnavis_amruta should realise its suppressing Fundamental rights of citizens. Shame pic.twitter.com/Cax0gAQAme
— History Of India (@RealHistoriPix) July 13, 2019
ಇದಕ್ಕೆ ತಕ್ಷಣವೇ ಮರು ಟ್ವೀಟ್ ಮಾಡಿರುವ ಮುಂಬೈ ಪೊಲೀಸರು, “ನಾವು ಯಾವಾಗಲೂ ಎಲ್ಲಾ ನಾಗರಿಕರಿಗೂ ಸಮಾನವಾಗಿ ನಡೆಸಿಕೊಳ್ಳುತ್ತೇವೆ. ನಿಮ್ಮ ಟ್ವಿಟರ್ ಖಾತೆ ಬಳಸಲು ಮುಕ್ತವಾಗಿದೆ. ನಿಮಗೆ ಆಗಿರುವ ತೊಂದರೆ ಬಗ್ಗೆ ವಿಷಾದಿಸುತ್ತೇವೆ. ಈ ವ್ಯತ್ಯಾಸದ ಬಗ್ಗೆ ನಮ್ಮ ತಾಂತ್ರಿಕ ಸಿಬ್ಬಂದಿ ತನಿಖೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ನಟಿ ಪಾಯಲ್ ರೋಹ್ಟಗಿ ಪರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಸಹ ಟ್ವೀಟ್ ಮಾಡಿದ್ದು, ಒಬ್ಬ ನಾಗರೀಕರಾಗಿ ಎಲ್ಲರಿಗೂ ಅವರ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಅದನ್ನು ಯಾರೂ ನಿರ್ಬಂಧಿಸಬಾರದು. ತಕ್ಷಣ ಪಾಯಲ್ ರೋಹ್ಟಗಿ ಅವರ ಸಮಸ್ಯೆಯತ್ತ ಗಮನ ಹರಿಸಿ ಎಂದು ಮುಂಬೈ ಪೊಲೀಸರಿಗೆ ಅಮೃತ ಮನವಿ ಮಾಡಿದ್ದಾರೆ.











































