ಡಿಯರ್ ಕಾಮ್ರೇಡ್ ಗೆ ರಶ್ಮಿಕಾ ರೆಫರ್ ಮಾಡಿದ್ದು ವಿಜಯ್ ದೇವರಕೊಂಡ!

Picture of Cinibuzz

Cinibuzz

Bureau Report

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಡಿಯರ್ ಕಾಮ್ರೇಡ್. ಇದೇ ತಿಂಗಳ 26ರಂದು ಡಿಯರ್ ಕಾಮ್ರೇಡ್ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದ ಪ್ರತಿಕ್ರಿಯೆಯನ್ನೇ ಗಳಿಸುತ್ತಿದೆ. ಈ ಮಧ್ಯೆ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ.

ಡಿಯರ್ ಕಾಮ್ರೇಡ್ ಸಿನಿಮಾ ನಿರ್ದೆಶಕರು ಚಿತ್ರದ ನಾಯಕಿಯ ಪಾತ್ರಕ್ಕೆ ರಶ್ಮಿಕಾ ಅಥವಾ ಸಾಯಿ ಪಲ್ಲವಿ ಎಂಬ ಆಯ್ಕೆಯನ್ನು ಇಟ್ಟುಕೊಂಡಿದ್ದರಂತೆ. ಅಲ್ಲದೇ ಇಬ್ಬರೂ ಪಾತ್ರಕ್ಕೆ ಫಿಟ್ ಆಗುತ್ತಾರೆ ಎಂಬ ಭರವಸೆಯನ್ನು ಅವರು ಹೊಂದಿದ್ದರಂತೆ. ಆದರೆ ನಾಯಕ ವಿಜಯ್ ದೇವರಕೊಂಡ ಅವರೇ ಸ್ವತಃ ಸಾಯಿಪಲ್ಲವಿಯನ್ನು ರಿಜೆಕ್ಟ್ ಮಾಡಿ ರಶ್ಮಿಕಾ ಮಂದಣ್ಣ ಅವರನ್ನು ಚ್ಯೂಸ್ ಮಾಡಿದ್ದು ಎಂಬ ಗಾಸಿಪ್ ಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದು, “ಇದೆಲ್ಲ ಸುಳ್ಳು.. ರಶ್ಮಿಕಾ ನನ್ನ ಫ್ರೆಂಡ್ ಎಂಬ ಮಾತ್ರಕ್ಕೆ ಆಕೆಯನ್ನು ನಾನು ಚ್ಯೂಸ್ ಮಾಡಲು ಹೇಗೆ ಸಾಧ್ಯ. ಫ್ರೆಂಡ್ ಶಿಪ್ ಬೇರೆ. ಸಿನಿಮಾನೇ ಬೇರೆ. ಪಾತ್ರಕ್ಕೆ ಅವರು ಸ್ಯೂಟ್ ಆಗುತ್ತಾರೆ ಎಂಬ ಕಾರಣಕ್ಕಾಗಿಯಷ್ಟೇ ರಶ್ಮಿಕಾ ಆಯ್ಕೆಯಾಗಿದ್ದಾರೆ. ಅಲ್ಲದೇ ನಾನು ಸಾಯಿ ಪಲ್ಲವಿಯನ್ನೇಕೆ ರಿಜೆಕ್ಟ್ ಮಾಡಲಿ. ಅದೆಲ್ಲವೂ ನಿರ್ದೇಶಕರಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top