ತಮ್ಮ ಮಾತಿನ ಮೂಲಕವೇ ನೋಡುಗರನ್ನು ಸೆಳೆಯುವ ನಟ ನಿರೂಪಕ ಡ್ಯಾನಿಶ್ ಸೇಠ್. ಆ ಕಾರಣಕ್ಕಾಗಿಯೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಡ್ಯಾನಿಶ್ ಸೇಠ್ ಇಂಡಿಯಾ ಟೀಮ್ ಮತ್ತು ಆರ್ ಸಿ ಬಿ ಜತೆಗೆ ಫನ್ನಿ ಇಂಟರ್ ವ್ಯೂ ಮಾಡುವ ಮೂಲಕವೂ ಸಾಕಷ್ಟು ಮಜಾ ನೀಡಿದ್ದರು.

ರಾಷ್ಟ್ರದಾದ್ಯಂತ ಅವರ ತರ್ಲೆ ತುಂಟಾಟಗಳನ್ನು ಮಜಾ ಮಾಡುವವರೇ ಹೆಚ್ಚು. ಇತ್ತೀಚಿಗೆ ಪಾಕಿಸ್ತಾನದ ಅಭಿಮಾನಿಯೊಬ್ಬರು ಡ್ಯಾನಿಶ್ ಸೇಠ್ ಅವರನ್ನು ಭೇಟಿಯಾಗಿ ಪಾಕಿಸ್ತಾನದ ಜರ್ಸಿಯೊಂದನ್ನು ಗಿಫ್ಟ್ ಮಾಡಿದ್ದಾರೆ. ಅಭಿಮಾನಿಯ ಉಡುಗೊರೆಯನ್ನು ಡ್ಯಾನಿಶ್ ಸೇಠ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಚಿತ್ರದಲ್ಲಿ ಡ್ಯಾನಿಶ್ ಸೇಠ್ ಅಸ್ಗರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.











































