ಪ್ರೇಮ ಕಾವ್ಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರತಿಬಿಂಬಿಸುವ ಸಿನಿಮಾ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್. ಇಲ್ಲಿಯವರೆಗೂ ಅವರ ಬಹಳಷ್ಟು ಪ್ರೇಮ ಕಾವ್ಯಗಳು ಬ್ಲಾಕ್ ಬಸ್ಟರ್ ಹಿಟ್ಸ್ ಸಿನಿಮಾಗಳಾಗಿ ಚಂದನವನದ ಸಿನಿಮಾ ಪಟ್ಟಿಗೆ ಸೇರ್ಪಡೆಯಾಗಿದೆ. ಸದ್ಯ ನಾಗತಿಹಳ್ಳಿ ಚಂದ್ರಶೇಖರ್ ‘ಭಾರತ v/s ಇಂಗ್ಲೆಂಡ್’ ಎಂಬ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ.

ಟೈಟಲ್ ಕೇಳಿದಾಕ್ಷಣ ಅರೇ.. ಮೇಷ್ಟ್ರು ಕ್ರಿಕೆಟ್ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡ್ತಾರಾ ಅನ್ನೋ ಡೌಟು ಅಭಿಮಾನಿಗಳಲ್ಲಿ ಸುಳಿದಾಡಿದರೂ ಸಹ ಅವರ ಗೆಸ್ ಸುಳ್ಳು… ಎರಡು ದೇಶಗಳ ನಡುವೆ ಇರುವ ಸಾಂಸ್ಕೃತಿಕ ವಾಗ್ವಾದವನ್ನೇ ಪ್ರಮುಖ ಎಳೆಯಾಗಿಟ್ಟುಕೊಂಡು ಈ ಸಿನಿಮಾ ತಯಾರಾಗಿದ್ದು, ಕಥೆಗೆ ಪೂರಕವಾಗಿರಲೆಂದಷ್ಟೇ ಈ ಟೈಟಲನ್ನು ಇಡಲಾಗಿದೆ ಎನ್ನುತ್ತಾರೆ ನಾಗತಿಹಳ್ಳಿ. ಈ ಚಿತ್ರದಲ್ಲಿ ಟಗರು ಖ್ಯಾತಿಯ ವಸಿಷ್ಠ ಸಿಂಹ ಮತ್ತು ಮಾನ್ವಿತಾ ಕಾಮತ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರೂ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಲಂಡನ್ ನಲ್ಲಿಯೇ ಪೂರ್ಣಗೊಂಡಿದ್ದು, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಮುಂತಾದ ಭಾಷೆಗಳಿಗೆ ಡಬ್ ಮಾಡುವ ಆಲೋಚನೆ ಚಿತ್ರತಂಡದ್ದು.












































