ದರ್ಶನ್ ಗೆ ನಾಯಿಮರಿ ಗಿಫ್ಟ್ ಕೊಟ್ಟ ಚಿರು!

Picture of Cinibuzz

Cinibuzz

Bureau Report

ಚಂದನವನದಲ್ಲಿ ಸದ್ಯ ಬ್ಯುಸಿಯಾಗಿರುವ ನಟರ ಪೈಕಿ ಚಿರಂಜೀವಿ ಸರ್ಜಾ ಕೂಡ ಒಬ್ಬರು. ಈಗಾಗಲೇ ಅವರ ಸಿಂಗ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದ್ದು, ಸ್ವತಃ ದರ್ಶನ್ ಅವರೇ ಸಿಂಗನ ಶಾನೆ ಟಾಪಾಗವ್ಳೆ ಸಾಂಗನ್ನು ಮೆಚ್ಚಿ ಹೊಗಳಿದ್ದಾರೆ. ಈ ಮಧ್ಯೆ ದರ್ಶನ್ ಅವರಿಗೆ ಮೇಘನಾ ಮತ್ತು ಚಿರಂಜೀವಿ ಸರ್ಜಾ ಗಿಫ್ಟ್ ಒಂದನ್ನು ನೀಡಿದ್ದಾರೆ.

https://www.instagram.com/p/Bz4m3dQnMJc/?utm_source=ig_web_copy_link

ಯೆಸ್.. ಮೊದಲೇ ತಿಳಿದ ಹಾಗೆ ದರ್ಶನ್ ಅವರು ಪ್ರಾಣಿಪ್ರಿಯ. ಅದಕ್ಕಾಗಿಯೇ ಚಿರಂಜೀವಿ ಸರ್ಜಾ ದರ್ಶನ್ ಅವರಿಗೆ ತಮ್ಮ ಮನೆಯ ಭೀಮ ನಾಯಿಯ ಮಗನನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಮೇಘನಾ ರಾಜ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು, ”ದರ್ಶನ್ ಸರ್ ನಮ್ಮ ಕುಟುಂಬ ಸದಸ್ಯ ಇದ್ದ ಹಾಗೆ. ಅವರ ಪ್ರೋತ್ಸಾಹಕ್ಕೆ ನಮ್ಮ ಉಡುಗೊರೆ ಇದು” ಎಂದಿದ್ದಾರೆ. ದರ್ಶನ್ ಗೆ ಚಿರು ನಾಯಿಮರಿಯನ್ನು ಗಿಫ್ಟ್ ನೀಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top