ಸ್ಟಾರ್ ಸುವರ್ಣದಲ್ಲಿ ಚಾಲೆಂಜಿಂಗ್ ಸ್ಟಾರ್ ಯಜಮಾನ ಪ್ರಸಾರ!

Picture of Cinibuzz

Cinibuzz

Bureau Report

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಸೂಪರ್ ಹಿಟ್ ಸಿನಿಮಾ ಯಜಮಾನ. ಬಿಗ್ ಸ್ಕ್ರೀನ್ ನಲ್ಲಿ ಕಮಾಲು ಮಾಡಿದ್ದ ಯಜಮಾನ ಸ್ಮಾಲ್ ಸ್ಕ್ರೀನ್ ನಲ್ಲೂ ಧೂಳೆಬ್ಬಿಸಲು ಬರುತ್ತಿದೆ. ಹೌದು.. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಯಜಮಾನ ಇದೇ ಮೊಟ್ಟ ಮೊದಲ ಬಾರಿಗೆ ಪ್ರಸಾರವಾಗಲಿದೆ. ಈಗಾಗಲೇ ಸ್ಟಾರ್ ಸುವರ್ಣ ಚಿತ್ರದ ಪ್ರೋಮೋಗಳನ್ನು ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಪ್ರಸಾರದ ದಿನಾಂಕವನ್ನು ಶೀಘ್ರದಲ್ಲಿಯೇ ರಿವೀಲ್ ಕೂಡ ಮಾಡಲಿದೆ.

Yajamana | Movie Promo 2

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ 'D BOSS' ದರ್ಶನ್ ಅಭಿನಯದ ಬ್ಲಾಕ್ ಬಸ್ಟರ್ ಚಲನಚಿತ್ರ "ಯಜಮಾನ"#Yajamana #StarSuvarna #Dboss #darshan DBoss Challenging Star – Darshan

Gepostet von Star Suvarna am Freitag, 12. Juli 2019

ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆಯನ್ನು ಮಾಡಿದ್ದ ಯಜಮಾನ ಸಿನಿಮಾವನ್ನು ವಿ. ಹರಿಕೃಷ್ಣ ನಿರ್ದೇಶನ ಮಾಡಿದ್ದರು. ಇದು ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಕೂಡ. ದರ್ಶನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್ ಕಾಣಿಸಿಕೊಂಡಿದ್ದರು. ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಶೈಲಜಾ ನಾಗ್ ಮತ್ತು ಬಿ. ಸುರೇಶ್ ಯಜಮಾನ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

ಇನ್ನಷ್ಟು ಓದಿರಿ

Scroll to Top