ವಿಷ್ಣು ಸರ್ಕಲ್ ಧ್ವನಿ ಸುರಳಿ ಬಿಡುಗಡೆ!

Picture of Cinibuzz

Cinibuzz

Bureau Report

ಈಗಾಗಲೇ ಸಾಕಷ್ಟು ವಿಚಾರಗಳಿಂದ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ವಿಷ್ಣು ಸರ್ಕಲ್. ಇತ್ತೀಚಿಗೆ ಚಿತ್ರದ ಧ್ವನಿಸುರಳಿ ಕಾರ್ಯಕ್ರಮವನ್ನು ನವರಸ ನಾಯಕ ಜಗ್ಗೇಶ್ ಹಾಗೂ ಪರಿಮಳಾ ಜಗ್ಗೇಶ್ ಉದ್ಘಾಟಿಸಿದರು. ಅಲ್ಲದೇ ಚಿತ್ರದ ಆಡಿಯೋವನ್ನು ಅವರೇ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ವಿಷ್ಣು ಸರ್ಕಲ್ ಯುವ ಜನಾಂಗವನ್ನು ಗಮನದಲ್ಲಿಟ್ಟುಕೊಂಡು ತಯಾರಿಸುವ ಪಕ್ಕಾ ಯೂಥ್ ಓರಿಯೆಂಟೆಡ್ ಸಿನಿಮಾ. ಈ ಚಿತ್ರದ ಮೂಲಕ ಗುರುರಾಜ್ ಜಗ್ಗೇಶ್ ಹೊಸ ಗೆಟಪ್ ನಲ್ಲಿ ಮಿಂಚಲಿದ್ದಾರೆ. ಇನ್ನು ನಾಯಕಿಯರಾಗಿ ಸಂಹಿತಾ ವಿನ್ಯಾ ಹಾಗೂ ದಿವ್ಯಾ ಗೌಡ ಸಹ ಅಭಿನಯಿಸಿ ಚಿತ್ರಕ್ಕೆ ಕಳೆ ತಂದಿದ್ದಾರೆ. ಉಳಿದಂತೆ ದತ್ತಣ್ಣ, ದತ್ತಣ್ಣ, ವಿ.ಮನೋಹರ್, ಬಿರಾದರ್, ರಾಕ್ ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ್ ತಾರಾಬಳಗದಲ್ಲಿದ್ದಾರೆ. ವಿಷ್ಣು ಸರ್ಕಲ್ ಸಿನಿಮಾವನ್ನು ಲಕ್ಷ್ಮಿ ದಿನೇಶ್ ನಿರ್ದೇಶನ ಮಾಡಿದ್ದಾರೆ.  ‘ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟವಾಗುವಂತಹ ಸಿನಿಮಾ ಇದಾಗಿದ್ದು, ‘ವಿಷ್ಣು ಸರ್ಕಲ್’ ಏನೆಂಬುದಕ್ಕೆ ಸಿನಿಮಾದಲ್ಲಿ ಉತ್ತರ ಸಿಗಲಿದ್ದು ಪ್ರೀತಿ, ಪ್ರೇಮ, ಹುಡುಗಾಟ, ತುಂಟಾಟ, ಸೆಂಟಿಮೆಂಟ್ ಎಲ್ಲ ಎಲಿಮೆಂಟುಗಳು ಸಿನಿಮಾದಲ್ಲಿವೆ. ಹಾಗಾಗಿ ಎಲ್ಲರೂ ಈ ಚಿತ್ರವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆಯಲ್ಲಿದ್ದೇನೆ ಎನ್ನುತ್ತಾರೆ ನಿರ್ದೇಶಕ ಲಕ್ಷ್ಮಿ ದಿನೇಶ್.

ಇನ್ನಷ್ಟು ಓದಿರಿ

Scroll to Top