ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕನ್ನಡದ ಬಹುಕೋಟಿ ವೆಚ್ಚದ ಸಿನಿಮಾ ಕುರುಕ್ಷೇತ್ರ. ಈಗಾಗಲೇ ಟ್ರೇಲರ್, ಟೀಸರ್, ಆಡಿಯೋ ಮೂಲಕ ಅಬ್ಬರಿಸುತ್ತಿರುವ ಸಿನಿಮಾ ಒಂದೊಂದೇ ಲಿರಿಕಲ್ ವಿಡಿಯೋ ಸಾಂಗನ್ನು ರಿಲೀಸ್ ಮಾಡುವ ಮೂಲಕ ಕಮಾಲು ಮಾಡುತ್ತಿದೆ. ಈಗಾಗಲೇ ಸಾಹೋರೆ ಸಾಹೋ ಹಾಡು ಬಿಡುಗಡೆಯಾಗಿದ್ದು, ಮಿಲಿಯನ್ ಗಟ್ಟಲೇ ಹಿಟ್ಸ್ ಪಡೆದು ಮುನ್ನುಗ್ಗುತ್ತಿದೆ.
https://www.youtube.com/watch?v=H4Q1cRHrAqQ
ಸದ್ಯ ದುರ್ಯೋಧನ ಮತ್ತು ಭಾನುಮತಿ ದಂಪತಿ ನಡುವಿನ ಯುಗಳ ಗೀತೆ ಚಾರುತಂತಿ ಬಿಡುಗಡೆಯಾಗಿದ್ದು, ಅಬ್ಬರದ ಕುರುಕ್ಷೇತ್ರ ರೊಮ್ಯಾಂಟಿಕ್ ಮೂಡನ್ನು ಅಭಿಮಾನಿಗಳಲ್ಲಿ ಕ್ರಿಯೇಟ್ ಮಾಡುತ್ತಿದೆ. ನಿನ್ನ ತನುವು ನುಡಿಸಲು ಬರುವೇ ದಿನ ದಿನ ಎಂಬ ಸಾಲಿನಿಂದ ಶುರುವಾಗುವ ಚಾರುತಂತಿಯನ್ನು ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಅನುಭವಿಸಿ ಹಾಡಿದಂತಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ವಿ. ನಾಗೇಂದ್ರ ಪ್ರಸಾದ್ ಈ ಹಾಡನ್ನು ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದನವನದ ಸಾಕಷ್ಟು ಹಿರಿ ಕಿರಿಯರೆಲ್ಲರೂ ಅಭಿನಯಿಸಿರುವ ಕುರುಕ್ಷೇತ್ರ ಆಗಸ್ಟ್ 2ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
No Comment! Be the first one.