ಜೋಗಿ ಪ್ರೇಮ್ ಕಂಠ ಸಿರಿಯಲ್ಲಿ ಸಿಂಗ ಸೆಂಟಿಮೆಂಟ್ ಸಾಂಗ್!

Picture of Cinibuzz

Cinibuzz

Bureau Report

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಿಂಗ. ಈಗಾಗಲೇ ಈ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ಹಾಗೂ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದೆ. ಇದೀಗ ಸಿಂಗನ ಮತ್ತೊಂದು ಹಾಡು ರಿಲೀಸ್ ಆಗಿದೆ. ಯೆಸ್.. ಜೋಗಿ ಪ್ರೇಮ್ ಕಂಠ ಸಿರಿಯಲ್ಲಿ ಮೂಡಿಬಂದಿರುವ ಮಗ ಮತ್ತು ತಾಯಿ ನಡುವಿನ ಬಾಂದವ್ಯದ ಬಗೆಗೆ ಇರುವ ಹಾಡು ಇದಾಗಿದೆ. ಕೇಳುಗರು ಮೈ ಮರೆಯುವ ಮಟ್ಟಿಗೆ ಈ ಹಾಡು ಮೂಡಿಬಂದಿದೆ.

ಇದೇ ಜುಲೈ 19ರಂದು ರಾಜ್ಯಾದ್ಯಂತ ಸಿಂಗ ಚಿತ್ರ ತೆರೆ ಕಾಣಲಿದೆ. ಸಿಂಗನ ತಾರಾಂಗಣದಲ್ಲಿ ಶಿವರಾಜ್ ಕೆ. ಆರ್ ಪೇಟೆ, ಹಿರಿಯ ನಟಿ ತಾರಾ, ರವಿಶಂಕರ್, ಬಿ ಸುರೇಶ್, ಕಡ್ಡಿಪುಡಿ ಚಂದ್ರು, ಅಕಾಮಿಡಿ ಕಿಲಾಡಿ ಸೀಜನ್ 2 ವಿನ್ನರ್ ಮಡೆನೂರು ಮನು, ಅರುಣಾ ಬಾಲರಾಜ ಇನ್ನಿತರರು ನಟಿಸಿದ್ದಾರೆ.  ಉದಯ್ ಕೆ ಮೆಹ್ತಾ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಾಮ್ ಲೀಲಾ ಫೇಮಿನ ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ. ಧರ್ಮ ವಿಶ್ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ, ಗಣೇಶ್ ಮಲ್ಲಯ್ಯ ಸಂಕಲನ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top