ಶ್ರದ್ಧಾ ಕಪೂರ್ ಮದುವೆ ವಿಚಾರಕ್ಕೆ ಬಿದ್ದು ಬಿದ್ದು ನಕ್ಕ ಶಕ್ತಿ ಕಪೂರ್!

Picture of Cinibuzz

Cinibuzz

Bureau Report

ಶ್ರದ್ಧಾ ಕಪೂರ್ ಚೊಚ್ಚಲ ಬಾರಿಗೆ ಟಾಲಿವುಡ್ ನಲ್ಲಿ ನಟಿಸಿರುವ ಸಾಹೋ ಮುಂದಿನ ತಿಂಗಳು ಸ್ವತಂತ್ರ್ಯ ದಿನಾಚರಣೆಗೆ ತೆರೆ ಕಾಣಲಿದೆ. ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಈ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡಿದ್ದಾರೆ.

ಸದ್ಯ ಬಿ ಟೌನಿನಲ್ಲಿ ಛಾಯಾಗ್ರಹಕ ರೋಹನ್ ಶ್ರೇಷ್ಟಾ ಅವರೊಂದಿಗೆ ಶ್ರದ್ಧಾ ಕಪೂರ್ ಸೈಲೆಂಟಾಗಿಯೇ ಕದ್ದು ಮದುವೆಯಾಗಲಿದ್ದಾರೆ ಎಂಬ ಗಾಸಿಪ್ಪೊಂದು ಹರಿದಾಡುತ್ತಿದೆ. ಈ ವಿಚಾರಕ್ಕೆ ಶ್ರದ್ಧಾ ಯಾವುದೇ ಪ್ರತಿಕ್ರಿಯೆಯನ್ನು ಕೊಡದೇ ಮೌನ ವಹಿಸಿದ್ದಾರೆ. ಈ ಮಧ್ಯೆ ಶ್ರದ್ಧಾ ಕಪೂರ್ ಅವರ ತಂದೆ ಶಕ್ತಿ ಕಪೂರ್ ಅವರನ್ನು ಕೇಳಿದಾಗ ನನ್ನ ಮಗಳ ರಹಸ್ಯ ವಿವಾಹದ ಬಗ್ಗೆ ನನಗೆ ತಿಳಿದಿಲ್ಲ. ನಿಜವಾಗಿಯೂ ನನ್ನ ಮಗಳು ಶ್ರದ್ಧಾ ಕಪೂರ್ ಮದುವೆಯಾಗುತ್ತಿದ್ದಾಳೆ ಎಂದು ತಿಳಿದು ಬಂದರೆ ದಯವಿಟ್ಟು ನನ್ನನ್ನು ಮದುವೆಗೆ ಕರೆಯಿರಿ ಎಂದು ಬಿದ್ದು ಬಿದ್ದು ನಕ್ಕು ಸುಮ್ಮನಾಗಿದ್ದಾರಂತೆ. ಸದ್ಯ ಶ್ರದ್ಧಾ ಸಾಹೋ ಹೊರತಾಗಿಯೂ ಸ್ಟ್ರೀಟ್ ಡ್ಯಾನ್ಸರ್ 3ಡಿ, ಭಾಗಿ 3, ಚಿಚೋರ್ ಸಿನಿಮಾಗಳಲ್ಲೂ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top