ಕಾಸ್ಟಿಂಗ್ ಕೌಚ್ ವಿವಾಹ ಸೃಷ್ಟಿಸಿದ್ದ ನಟಿ ಶ್ವೇತಾ ರೆಡ್ಡಿ ಹಾಗೂ ನಟಿ ಗಾಯತ್ರಿ ಗುಪ್ತಾ ಟಿವಿ ಕಾರ್ಯಕ್ರಮವೊಂದರಲ್ಲಿ ಮತ್ತೊಂದು ವಿವಾದಾತ್ಮಕ ಬಾಂಬ್ ಸಿಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕುರಿತು ಮಾತನಾಡುತ್ತಿದ್ದ ಈ ನಟಿಮಣಿಯರು ಬಿಗ್ ಬಾಸ್ ಶೋ ಗೆ ಈ ಹಿಂದೆ ಎರಡು ಸೀಸನ್ ನಲ್ಲಿ ನಮಗೆ ಆಫರ್ ಬಂದಿತ್ತು. ಆದರೆ ಅದಕ್ಕಾಗಿ ನಮ್ಮನ್ನು ಮಂಚಕ್ಕೆ ಕರೆದಿದ್ದರು ಎಂದು ಹೇಳುತ್ತಾ ನೆರೆದಿದ್ದವರ ಕಣ್ಣರಳುವಂತೆ ಮಾಡಿದ್ದಾರೆ.

ಅಲ್ಲದೇ ಆಡಿಷನ್ ವೇಳೆ ಅಂತಿಮ ಸುತ್ತಿನಲ್ಲಿ ಆಡಿಷನ್ ನಡೆಸುತ್ತಿದ್ದವರು ಬಿಗ್ ಬಾಸ್ ಮನೆಯಲ್ಲಿ 100 ದಿನ ಇರಬೇಕು ಎಂದು ಹೇಳಿದ್ದರು. ನಮಗೆ ಅದನ್ನು ಕೇಳಿ ಶಾಕ್ ಕೂಡ ಆಗಿತ್ತು. ಸೆಕ್ಸ್ ಮಾಡದೇ ಮನೆಯಲ್ಲಿ 100 ದಿನ ಇಲು ಸಾಧ್ಯವೇ ಎಂದು ಸಹ ಕೇಳಿದ್ದರು ಎಂದು ಶಾಕಿಂಗ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಆಯೋಜಕರ ವಿರುದ್ಧವೂ ಗುಡುಗಿರುವ ನಟಿ ಗಾಯತ್ರಿ ಗುಪ್ತಾ ಮತ್ತು ಶ್ವೇತಾ ರೆಡ್ಡಿ ಇಂಡಸ್ಟ್ರಿಯಲ್ಲಿ ನಮ್ಮನ್ನು ಸೆಕ್ಸ್ ಗೊಂಬೆಗಳಂತೆ ನೋಡುತ್ತಿದ್ದಾರೆ ಎಂದು ಅಳಲು ಹೇಳಿಕೊಂಡಿದ್ದಾರೆ.











































