ಅರಂ 2 ಚಿತ್ರಕ್ಕೆ ನಯನಾ ತಾರ ಬದಲಾಗಿ ಸಮಂತಾ!

Picture of Cinibuzz

Cinibuzz

Bureau Report

ಈ ಹಿಂದೆ ಅರಂ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರ ದಕ್ಷ ಜಿಲ್ಲಾಧಿಕಾರಿಯಾಗಿ ನಟಿಸಿ ನೋಡುಗರ ಗಮನಸೆಳೆದಿದ್ದರು. ಸದ್ಯ ಅರಂ 2 ಚಿತ್ರ ತೆರೆಗೆ ಬರಲಿದ್ದು, ಈ ಚಿತ್ರಕ್ಕೆ ನಯನತಾರ ಬದಲಾಗಿ ಸಮಂತಾ ಅಕ್ಕಿನೇನಿ ನಟಿಸುತ್ತಾರೆಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಸಮಂತಾ ಸದ್ಯ ಮಹಿಳಾ ಕೇಂದ್ರಿತ ಸಿನಿಮಾದಲ್ಲಿ ಹೆಚ್ಚು ನಟಿಸುತ್ತಿದ್ದು, ಸಮಂತಾ ಅಭಿನಯದ ಓ ಬೇಬಿ ಬಿಡುಗಡೆಯಾಗಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಈಗ ಮತ್ತೊಮ್ಮೆ ಅರಂ 2 ಮೂಲಕ ಮತ್ತೊಮ್ಮೆ ಕಮಾಲು ಮಾಡಲು ಸಮಂತಾ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ರಿಲೀಸ್ ಆಗಿದ್ದು, ಅರಂ ಸೂಪರ್ ಹಿಟ್ ಸಿನಿಮಾ ಆಗಿದ್ದಲ್ಲದೇ ನಯನತಾರಾಗೆ ಹೊಸ ಇಮೇಜನ್ನು ತಂದುಕೊಟ್ಟಿತ್ತು. ಸಮಾಜದ ಅವ್ಯವಸ್ಥೆಯ ಬೆಳಕು ಚೆಲ್ಲುವ ಕಥಾ ಹಂದರವನ್ನು ಹೊಂದಿದ್ದು, ಸಾಕಷ್ಟು ಜನ ಮನ್ನಣೆಯನ್ನು ಗಳಿಸಿದಲ್ಲದೇ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ಹಿಡಿದಿತ್ತು. ಈಗ ಅರಂ 2 ಮತ್ತಷ್ಟು ಪವರ್ ಫುಲ್ ಆಗಿರಲಿದ್ದು, ಅರಂನ ಮುಂದುವರೆದ ಭಾಗವೇ ಆಗಿದ್ದರೂ ಬೇರೆಯದೇ ಕತೆಯನ್ನು ಹೊಂದರಲಿದೆಯಂತೆ. ಅರಂ ನಿರ್ದೇಶಕ ಗೋಪಿ ನಾಯನಾರ್ ಅವರೇ ಅರಂ 2 ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮೂಲಗಳ ಪ್ರಕಾರ ಗೋಪಿ ಅವರು ಸಮಂತಾ ಅವರಿಗೆ ಚಿತ್ರಕತೆ ಬಗ್ಗೆ ವಿವರಿಸಿದ್ದು, ಕತೆ ಕೇಳಿ ಇಷ್ಟಪಟ್ಟಿರುವ ಸಮಂತಾ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿವೆ.

ಇನ್ನಷ್ಟು ಓದಿರಿ

Scroll to Top