ಮಹಿರ ಟ್ರೇಲರ್ ಬಿಡುಗಡೆ!

Picture of Cinibuzz

Cinibuzz

Bureau Report

ಮಹೇಶ್ ಗೌಡ ನಿರ್ದೇಶನದ ಮಹಿರ ಚಿತ್ರದ ಟ್ರೇಲರ್ ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ಪ್ರಾಬ್ಲಮ್ ಎಲ್ಲಿಂದ ಶುರುವಾಯ್ತೋ, ಎಲ್ಲಿಂದ ಶುರುವಾಯ್ತೋ.. ಅಲ್ಲಿಂದಲೇ ಕೊನೆಗೊಳಿಸ್ತೀನಿ’ ಎಂಬ ಡೈಲಾಗ್ ಈ ಟ್ರೇಲರ್ ನ ಪ್ರಮುಖ ಆಕರ್ಷಣೆಯಾಗಿದ್ದು, ‘ಮೊಟ್ಟೆ’ ಸ್ಟಾರ್ ರಾಜ್ ಬಿ ಶೆಟ್ಟಿ ಇಲ್ಲಿ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಿರದಲ್ಲಿ ಮಾಯಾ ಎಂಬ ಪಾತ್ರವೂ ಹೈಲೈಟ್ ಆಗಿದ್ದು, ಆ ಪಾತ್ರದ ಸುತ್ತಲೇ ಕಥೆ ಸಾಗುತ್ತದೆ.

ಇದೊಂದು ತಾಯಿ-ಮಗಳ ನಡುವೆ ನಡೆಯುವ ಕಥೆಯನ್ನು ಒಳಗೊಂಡಿದೆ. ತಾಯಿ ಮಗಳ ಮಧ್ಯೆ ಅಚಾನಕ್ಕಾಗಿ ಘಟನೆಯೊಂದು ಘಟಿಸುತ್ತದೆ. ಆ ಘಟನೆಯಿಂದ ತಾಯಿ ಮಗಳು ಹೊರಬರುತ್ತಾರೆ ಎಂಬುದೇ ಚಿತ್ರದ ಕಥೆ. ಚಿತ್ರದಲ್ಲಿ ವರ್ಜಿನಿಯ ರಾಡ್ರಿಗಸ್, ಚೈತ್ರಾ, , ಗೋಪಾಲ ಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ, ಅಪೂರ್ವ, ಸೋಮ ಇತರರು ನಟಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top